ಸೌರಾಷ್ಟ್ರ ಮೊದಲ ಇನಿಂಗ್ಸ್'ನಲ್ಲಿ 278 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಹರ್ಯಾಣ ಕೇವಲ 107 ರನ್'ಗಳಿಗೆ ಆಲೌಟ್ ಆಗುವ ಮೂಲಕ ಫಾಲೋ ಆನ್'ಗೆ ಒಳಗಾಯಿತು. ಮೊದಲ ಇನಿಂಗ್ಸ್'ನಲ್ಲಿ ಉನಾದ್ಕಟ್ 3 ವಿಕೆಟ್ ಪಡೆದರೆ, ಶೌರ್ಯ ಸನಾದಿಯ 4 ವಿಕೆಟ್ ಪಡೆದು ಸಂಭ್ರಮಿಸಿದರು.
ರೋಹ್ಟಕ್(ಅ.08): ಯುವ ವೇಗಿಗಳಾದ ಜಯದೇವ್ ಉನಾದ್ಕಟ್ ಹಾಗೂ ಶೌರ್ಯ ಸನಾದಿಯ ಅವರ ಮಾರಕ ದಾಳಿಯ ನೆರವಿನಿಂದ ಸೌರಾಷ್ಟ್ರ ತಂಡವು ಹರ್ಯಾಣ ವಿರುದ್ಧ ಇನಿಂಗ್ಸ್ ಹಾಗೂ 31 ರನ್'ಗಳ ಭರ್ಜರಿ ಜಯ ದಾಖಲಿಸುವುದರೊಂದಿಗೆ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಸೌರಾಷ್ಟ್ರ ಮೊದಲ ಇನಿಂಗ್ಸ್'ನಲ್ಲಿ 278 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಹರ್ಯಾಣ ಕೇವಲ 107 ರನ್'ಗಳಿಗೆ ಆಲೌಟ್ ಆಗುವ ಮೂಲಕ ಫಾಲೋ ಆನ್'ಗೆ ಒಳಗಾಯಿತು. ಮೊದಲ ಇನಿಂಗ್ಸ್'ನಲ್ಲಿ ಉನಾದ್ಕಟ್ 3 ವಿಕೆಟ್ ಪಡೆದರೆ, ಶೌರ್ಯ ಸನಾದಿಯ 4 ವಿಕೆಟ್ ಪಡೆದು ಸಂಭ್ರಮಿಸಿದರು.
ಇನ್ನೂ ಫಾಲೋ ಆನ್'ನಿಂದಾಗಿ ದ್ವಿತೀಯ ಇನಿಂಗ್ಸ್ ಆರಂಭಿಸಿದ ಹರ್ಯಾಣಕ್ಕೆ ಮತ್ತೆ ಉನಾದ್ಕಟ್ ಹಾಗೂ ಸನಾದಿಯ ಮಾರಕವಾಗಿ ಪರಿಣಮಿಸಿದರು. ದ್ವಿತೀಯ ಇನಿಂಗ್ಸ್'ನಲ್ಲಿ ಉನಾದ್ಕಟ್ 3 ವಿಕೆಟ್ ಪಡೆದರೆ, ಸನಾದಿಯ 2 ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು. ಹರ್ಯಾಣ ಪರ ಚೈತನ್ಯ ಬಿಷ್ಣೋಯಿ 51 ರನ್ ಬಾರಿಸಿದ್ದು ಬಿಟ್ಟರೆ, ಉಳಿದ ಬ್ಯಾಟ್ಸ್'ಮನ್'ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬರಲಿಲ್ಲ. ಪರಿಣಾಮ ಹರ್ಯಾಣ ದ್ವಿತೀಯ ಇನಿಂಗ್ಸ್'ನಲ್ಲಿ 140 ರನ್'ಗಳಿಗೆ ಸರ್ವ ಪತನ ಕಾಣುವ ಮೂಲಕ ಸೌರಾಷ್ಟ್ರಕ್ಕೆ ಇನಿಂಗ್ಸ್ ಹಾಗೂ 31 ರನ್'ಗಳಿಂದ ಶರಣಾಯಿತು.