ಬ್ಯಾಂಕಾಕ್‌[ಆ.05]: ಭಾರತದ ಯುವ ಶಟ್ಲರ್‌ಗಳಾದ ಸಾತ್ವಿಕ್‌ ಸಾಯಿರಾಜ್‌ ಹಾಗೂ ಚಿರಾಗ್‌ ಶೆಟ್ಟಿ, ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಡಬಲ್ಸ್‌ ಚಾಂಪಿಯನ್‌ ಆಗುವ ಮೂಲಕ ಇತಿಹಾಸ ಬರೆದಿದ್ದಾರೆ.

ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌: ಫೈನಲ್‌ಗೆ ಸಾತ್ವಿಕ್‌-ಚಿರಾಗ್‌

ಭಾನುವಾರ ನಡೆದ ಫೈನಲ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್‌, ಚೀನಾದ ಲೀ ಜುನ್‌-ಲಿಯು ಚೆನ್‌ ಜೋಡಿ ವಿರುದ್ಧ 21-19, 18-21, 21-18 ಗೇಮ್‌ಗಳಲ್ಲಿ ರೋಚಕ ಗೆಲುವು ಸಾಧಿಸಿ ಪ್ರಶಸ್ತಿಗೆ ಮುತ್ತಿಟ್ಟರು.

ಸೂಪರ್‌ 500 ಅಥವಾ ಅದಕ್ಕಿಂತ ಉನ್ನತ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಪ್ರಸಸ್ತಿ ಗೆದ್ದ ಭಾರತದ ಮೊದಲ ಜೋಡಿ ಎನ್ನುವ ದಾಖಲೆಯನ್ನು ಸಾತ್ವಿಕ್‌ ಹಾಗೂ ಚಿರಾಗ್‌ ಬರೆದರು. 2019ರಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಜೋಡಿ ಫೈನಲ್‌ ಪ್ರವೇಶಿಸಿತ್ತು. 2018ರ ಕಾಮನ್‌ವೆಲ್ತ್‌ ಗೇಮ್ಸ್‌ನ ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌-ಚಿರಾಗ್‌ ಬೆಳ್ಳಿ ಗೆದ್ದಿದ್ದರು.

ಪಂದ್ಯದ ಪ್ರತಿ ಗೇಮ್‌ ಸಹ ಭಾರೀ ಪೈಪೋಟಿಯಿಂದ ಕೂಡಿತ್ತು. ಈ ಗೆಲುವಿನೊಂದಿಗೆ ಸಾತ್ವಿಕ್‌ ಹಾಗೂ ಚಿರಾಗ್‌ ವಿಶ್ವ ರಾರ‍ಯಂಕಿಂಗ್‌ ಪಟ್ಟಿಯಲ್ಲಿ ಅಗ್ರ 10ರೊಳಗೆ ಸ್ಥಾನ ಪಡೆಯಲಿದ್ದಾರೆ. ಸದ್ಯ ಈ ಜೋಡಿ 16ನೇ ಸ್ಥಾನದಲ್ಲಿದೆ.