‘‘ಈ ಟ್ರೋಫಿಯನ್ನು ಹಿಡಿಯುತ್ತಿರುವುದು ನನ್ನಲ್ಲಿ ಭುವನ ಸುಂದರಿಯ ಟ್ರೋಫಿಯನ್ನು ಹಿಡಿದಂತಾಗಿದೆ’’ ಎಂದು ಪಂದ್ಯದ ಬಳಿಕ ಸಾನಿಯಾ ಪ್ರತಿಕ್ರಿಯಿಸಿದರು.

ಬ್ರಿಸ್ಬೇನ್(ಜ.07): ಭಾರತದ ನಂ.1 ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಬ್ರಿಸ್ಬೇನ್ ಇಂಟರ್‌'ನ್ಯಾಷನಲ್ ಟೆನಿಸ್ ಚಾಂಪಿಯನ್‌ಶಿಪ್‌'ನಲ್ಲಿ ಪ್ರಶಸ್ತಿ ಗೆಲ್ಲುವುದರೊಂದಿಗೆ ಋತುವಿನಲ್ಲಿ ಶುಭಾರಂಭ ಮಾಡಿದ್ದಾರೆ.

ಇಂದು ನಡೆದ ಮಹಿಳೆಯರ ಡಬಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನ ಸೆಣಸಾಟದಲ್ಲಿ ಅಗ್ರ ಕ್ರಮಾಂಕಿತ ಜೋಡಿ ಸಾನಿಯಾ ಹಾಗೂ ಮತ್ತು ಆಕೆಯ ಜತೆಯಾಟಗಾರ್ತಿ ಅಮೆರಿಕದ ಬೆಥಾನಿ ಮಾಟೆಕ್ ಸ್ಯಾಂಡ್ಸ್ ರಷ್ಯಾದ ಎಕ್ತರೀನಾ ಮಕರೋವಾ ಹಾಗೂ ಎಲೆನಾ ವೆಸ್ನಿನಾ ಜೋಡಿಯನ್ನು 6-2, 6-3 ನೇರ ಸೆಟ್‌'ಗಳಲ್ಲಿ ಸೋಲಿಸಿ ಪ್ರಶಸ್ತಿ ಜಯಿಸಿತು.

‘‘ಈ ಟ್ರೋಫಿಯನ್ನು ಹಿಡಿಯುತ್ತಿರುವುದು ನನ್ನಲ್ಲಿ ಭುವನ ಸುಂದರಿಯ ಟ್ರೋಫಿಯನ್ನು ಹಿಡಿದಂತಾಗಿದೆ’’ ಎಂದು ಪಂದ್ಯದ ಬಳಿಕ ಸಾನಿಯಾ ಪ್ರತಿಕ್ರಿಯಿಸಿದರು. ಅಂದಹಾಗೆ ಇದೇ 16ರಿಂದ ಮೆಲ್ಬೋರ್ನ್‌ನಲ್ಲಿ ಶುರುವಾಗಲಿರುವ ಆಸ್ಟ್ರೇಲಿಯಾ ಓಪನ್‌'ನಲ್ಲಿ ಸಾನಿಯಾ ಜೆಕ್ ಆಟಗಾರ್ತಿ ಬಾರ್ಬೊರಾ ಸ್ಟ್ರಿಕೋವಾ ಜತೆಗೆ ಆಡಲಿದ್ದಾರೆ.