ನವದೆಹಲಿ(ಸೆ.26): ಭಾರತದ ಸ್ಟಾರ್‌ ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಡಬ್ಲೂಟಿಎ ಶ್ರೇಯಾಂಕದಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಇತ್ತೀಚೆಗಷ್ಟೇ ಟೋಕಿಯೊದಲ್ಲಿ ನಡೆದ ಪಾನ್‌ ಫೆಸಿಫಿಕ್‌ ಓಪನ್‌ ಟೆನಿಸ್‌ ಟ್ರೋಫಿಯನ್ನು ಸಾನಿಯಾ ಮತ್ತು ಸ್ಟ್ರಿಕೋವಾ ಜೋಡಿ ಗೆದ್ದಿತ್ತು. ಇದು ಕೂಡ ಆಕೆಯ ನಂ.1 ಸ್ಥಾನವನ್ನು ಅಬಾಧಿತವಾಗಿಸಿದೆ. ಸಾನಿಯಾ ಜೋಡಿ (9730) ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದಿದ್ದಾರೆ.

ಇನ್ನು ಪುರುಷರ ಶ್ರೇಯಾಂಕದಲ್ಲಿ ಭಾರತದ ಸಾಕೇತ್‌ ಮೈನೇನಿ 138ನೇ ಸ್ಥಾನದಲ್ಲಿದ್ದಾರೆ. ರಾಮ್‌ಕುಮಾರ್‌ ರಾಮನಾಥನ್‌ (229), ಯೂಕಿ ಭಾಂಬ್ರಿ (282) ಸ್ಥಾನ ಹೊಂದಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ರೋಹನ್‌ ಬೋಪಣ್ಣ (18), ಲಿಯಾಂಡರ್‌ ಪೇಸ್‌ (60)ನೇ ಸ್ಥಾನದಲ್ಲಿದ್ದಾರೆ.