ಸಾನಿಯಾ ಮತ್ತು ಸ್ಟ್ರೈಕೋವಾ ಜೋಡಿ 6-3, 7-6(7-3) ಸೆಟ್‌'ಗಳಿಂದ ಜೆಕ್‌'ಗಣರಾಜ್ಯದ ರೆನಟಾ ವೊರಾಕೊವಾ ಮತ್ತು ಹಾಲೆಂಡ್‌'ನ ಡೆಮಿ ಸ್ಚುವಾರ್ಸ್ ಎದುರು ಗೆಲುವು ಸಾಧಿಸಿದರು.
ಮಿಯಾಮಿ(ಮಾ.26): ಭಾರತದ ನಂಬರ್ ಒನ್ ಸ್ಟಾರ್ ಡಬಲ್ಸ್ ಆಟಗಾರ್ತಿಯಾದ ಭಾರತದ ಸಾನಿಯಾ ಮಿರ್ಜಾ ಮತ್ತು ಜೆಕ್ ಗಣರಾಜ್ಯದ ಬಾರ್ಬೋರಾ ಸ್ಟ್ರೈಕೋವಾ ಜೋಡಿ, ಮಿಯಾಮಿ ಟೆನಿಸ್ ಟೂರ್ನಿಯ ಪ್ರಿಕ್ವಾರ್ಟರ್ ಫೈನಲ್ ಹಂತಕ್ಕೇರಿದೆ.
ಇಲ್ಲಿನ ಟೆನಿಸ್ ಕೋರ್ಟ್ನಲ್ಲಿ ನಡೆದ ಪಂದ್ಯದಲ್ಲಿ ಸಾನಿಯಾ ಮತ್ತು ಸ್ಟ್ರೈಕೋವಾ ಜೋಡಿ 6-3, 7-6(7-3) ಸೆಟ್'ಗಳಿಂದ ಜೆಕ್'ಗಣರಾಜ್ಯದ ರೆನಟಾ ವೊರಾಕೊವಾ ಮತ್ತು ಹಾಲೆಂಡ್'ನ ಡೆಮಿ ಸ್ಚುವಾರ್ಸ್ ಎದುರು ಗೆಲುವು ಸಾಧಿಸಿದರು. ಮೊದಲ ಸೆಟ್'ನಲ್ಲಿ ಸುಲಭ ಗೆಲುವು ದಾಖಲಿಸಿದ ಇಂಡೋ-ಜೆಕ್ ಜೋಡಿಗೆ, ಶ್ರೇಯಾಂಕ ರಹಿತ ಆಟಗಾರ್ತಿಯರಾದ ರೆನಟಾ ಮತ್ತು ಡೆಮಿ ಜೋಡಿ 2ನೇ ಸೆಟ್ನಲ್ಲಿ ಪ್ರಬಲ ಪೈಪೋಟಿ ನೀಡಿತು.
ಸಾನಿಯಾ ಮತ್ತು ಸ್ಟ್ರೈಕೋವಾ ಜೋಡಿ ಟೈ ಬ್ರೇಕರ್ ಅವಕಾಶದಲ್ಲಿ ಅಂಕ ಹೆಚ್ಚಿಸಿಕೊಂಡು ಪಂದ್ಯ ಜಯಿಸುವಲ್ಲಿ ಯಶಸ್ವಿಯಾಯಿತು.
