Asianet Suvarna News Asianet Suvarna News

ಡಿ ಕಾಕ್ ಬದಲು ಡೆಲ್ಲಿಗೆ ಸ್ಯಾಮುಯಲ್ಸ್

1 ಕೋಟಿ ರೂಪಾಯಿ ಮೂಲಬೆಲೆ ಹೊಂದಿದ್ದ ಸ್ಯಾಮುಯಲ್ಸ್ ಐಪಿಎಲ್ ಹರಾಜಿನಲ್ಲಿ ಯಾವೊಬ್ಬ ಪ್ರಾಂಚೈಸಿಯೂ ಖರೀಧಿಸುವ ಮನಸ್ಸು ಮಾಡಿರಲಿಲ್ಲ.

Samuels replaces de Kock for Delhi Daredevils
  • Facebook
  • Twitter
  • Whatsapp

ನವದೆಹಲಿ(ಏ.28): ಗಾಯಾಳು ಕ್ವಿಂಟನ್ ಡಿ ಕಾಕ್ ಬದಲಿಗೆ ಡೆಲ್ಲಿ ಡೇರ್‌'ಡೆವಿಲ್ಸ್ ತಂಡ ವೆಸ್ಟ್‌'ಇಂಡೀಸ್‌'ನ ಅನುಭವಿ ಬ್ಯಾಟ್ಸ್‌'ಮನ್ ಮರ್ಲಾನ್ ಸ್ಯಾಮುಯಲ್ಸ್ ಅವರನ್ನು ಸೇರಿಸಿಕೊಂಡಿದೆ.

ಕಳೆದ ತಿಂಗಳು ನ್ಯೂಜಿಲೆಂಡ್ ಪ್ರವಾಸದ ವೇಳೆ ಬಲಗೈನ ತೋರು ಬೆರಳಿಗೆ ಗಾಯ ಮಾಡಿಕೊಂಡಿದ್ದ ಡಿ ಕಾಕ್, ಪಂದ್ಯಾವಳಿಯಿಂದ ಹೊರಬಿದ್ದಿದ್ದರು.

71 ಟೆಸ್ಟ್, 187 ಏಕದಿನ ಹಾಗೂ 55 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿರುವ ಸ್ಯಾಮುಯಲ್ಸ್ ಈ ಮೊದಲು ಪುಣೆ ವಾರಿಯರ್ಸ್‌ ಪರ ಐಪಿಎಲ್ ಆಡಿದ್ದರು.

2012ರ ಆವೃತ್ತಿಯಲ್ಲಿ 8 ಪಂದ್ಯಗಳನ್ನು ಆಡಿದ್ದ ಅವರು, 2013ರಲ್ಲಿ ಕೇವಲ 2 ಪಂದ್ಯಗಳನ್ನಷ್ಟೇ ಆಡಿದ್ದರು.

1 ಕೋಟಿ ರೂಪಾಯಿ ಮೂಲಬೆಲೆ ಹೊಂದಿದ್ದ ಸ್ಯಾಮುಯಲ್ಸ್ ಐಪಿಎಲ್ ಹರಾಜಿನಲ್ಲಿ ಯಾವೊಬ್ಬ ಪ್ರಾಂಚೈಸಿಯೂ ಖರೀಧಿಸುವ ಮನಸ್ಸು ಮಾಡಿರಲಿಲ್ಲ.

 

Follow Us:
Download App:
  • android
  • ios