ದೆಹಲಿ(ಸೆ. 16): ಡೇವಿಸ್ ಕಪ್ ಟೆನಿಸ್ ಟೂರ್ನಿಯ ವರ್ಲ್ಡ್ ಗ್ರೂಪ್ ಪ್ಲೇಆಫ್'ನ ಮೊದಲ ದಿನದ ಎರಡೂ ಆಟಗಳಲ್ಲಿ ಸ್ಪೇನ್ ವಿರುದ್ಧ ಭಾರತೀಯರು ಸೋಲನುಭವಿಸಿದ್ದಾರೆ. ಮೊದಲ ಸಿಂಗಲ್ಸ್'ನಲ್ಲಿ ರಾಮಕುಮಾರ್ ರಾಮನಾಥನ್ ವೀರೋಚಿತ ಸೋಲನುಭವಿಸಿದರೆ, ಎರಡನೇ ಸಿಂಗಲ್ಸ್'ನಲ್ಲಿ ಸಾಕೇತ್ ಮೈನೇನಿ ಸುಲಭವಾಗಿ ಶರಣಾಗಿದ್ದಾರೆ. ಇಂದು ನಡೆದ ಆಟದಲ್ಲಿ ಸಾಕೇತ್ ಮೈನೇನಿ ಅವರು ಸ್ಪೇನ್'ನ ಡೇವಿಡ್ ಫೆರೆರ್ ವಿರುದ್ಧ 1-6, 2-6, 1-6 ನೇರ ಸೆಟ್'ಗಳಿಂದ ಸೋಲನುಭವಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದಕ್ಕೆ ಮುನ್ನ ನಡೆದ ಮೊದಲ ಸಿಂಗಲ್ಸ್'ನಲ್ಲಿ ಫೆಲಿಶಿಯಾನೋ ಲೋಪೆಜ್ ಅವರು ಭಾರತದ ರಾಮಕುಮಾರ್ ರಾಮನಾಥನ್ ಅವರನ್ನು 6-4, 6-4, 3-6, 6-1ರಿಂದ ಸೋಲಿಸಿದರು. ಇದರೊಂದಿಗೆ ಸ್ಪೇನ್ ತಂಡ ಈ ಡೇವಿಸ್ ಕಪ್ ಪಂದ್ಯದಲ್ಲಿ 2-0 ಮುನ್ನಡೆ ಪಡೆದುಕೊಂಡಿದೆ.

ಶನಿವಾರ ಡಬಲ್ಸ್ ಆಟ ನಡೆಯಲಿದ್ದು, ಭಾರತದ ಲಿಯಾಂಡರ್ ಪೇಸ್ ಮತ್ತು ಸಾಕೇತ್ ಮೈನೇನಿ ಜೋಡಿ ಸ್ಪೇನ್'ನ ಫೆಲಿಶಿಯಾನೋ ಲೋಪೆಜ್ ಹಾಗೂ ಮಾರ್ಕ್ ಲೋಪೆಜ್ ಜೋಡಿಯನ್ನು ಎದುರುಗೊಳ್ಳಲಿದೆ. ಭಾರತ ಆ ಡಬಲ್ಸ್ ಆಟ ಗೆದ್ದರೆ ಈ ಪಂದ್ಯಕ್ಕೆ ಜೀವ ಸಿಕ್ಕಂತಾಗುತ್ತದೆ.