ಭಾರತದ ಬ್ಯಾಡ್ಮಿಂಟನ್ ತಾರಾ ಜೋಡಿಗಳು ವಿವಾಹಕ್ಕೆ ಸಜ್ಜಾಗಿದ್ದಾರೆ.  ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್‌ಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಡಿಸೆಂಬರ್ 16 ರಂದೇ ಸೈನಾ ವೈವಾಹಿಕ ಜೀವನಕ್ಕೆ ಕಾಲಿಡ್ತಾರ? ಸೈನಾ ಮದುವೆ ಕುರಿತು ಕುಟುಂಬ ಹೇಳೋದೇನು ಇಲ್ಲಿದೆ.

ಹೈದರಾಬಾದ್(ಸೆ.26): ಭಾರತದ ಬ್ಯಾಡ್ಮಿಂಟನ್ ಸ್ಟಾರ್‌ಗಳಾದ ಸೈನಾ ನೆಹ್ವಾಲ್ ಹಾಗೂ ಪರುಪಳ್ಳಿ ಕಶ್ಯಪ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮೂಲಗಳ ಪ್ರಕಾರ ಡಿಸೆಂಬರ್ 16 ರಂದು ಸೈನಾ ಹಾಗೂ ಕಶ್ಯಪ್ ವಿವಾಹ ನಡೆಯಲಿದೆ.

ಡಿಸೆಂಬರ್ 16 ರಂದು ಎರಡು ಕುಟುಂಬ ಹಾಗೂ ಆಪ್ತರ ಸಮ್ಮುಖದಲ್ಲಿ ಸೈನಾ ಹಾಗೂ ಪರುಪಳ್ಳಿ ಕಶ್ಯಪ್ ವಿವಾಹ ನಡೆಯಲಿದೆ. ಬಳಿಕ ಡಿಸೆಂಬರ್ 21 ರಂದು ಅದ್ಧೂರಿ ಆರತಕ್ಷತೆ ನಡೆಯಲಿದೆ.

View post on Instagram

ಸೈನಾ ಹಾಗೂ ಪರುಪಳ್ಳಿ ಕಶ್ಯಪ್ ಇಬ್ಬರೂ ಕೂಡ ಪುಲ್ಲೇಲ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಬೆಳೆದ ಪ್ರತಿಭೆಗಳು. ಹೀಗಾಗಿ ತಮ್ಮ ಅಭ್ಯಾಸದ ದಿನಗಳಿಂದ ಪರಿಚಿತರಾಗಿದ್ದ ಈ ಜೋಡಿ ಇದೀಗ ವೈವಾಹಿಕ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ. 

View post on Instagram

ಇತ್ತೀಚೆಗಿನ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಸೈನಾ ನೆಹ್ವಾಲ್ ಕಂಚಿನ ಪದಕ ಗೆದ್ದಿದ್ದರು. ಗೆಲುವಿನ ಬಳಿಕ ಸೈನಾ, ಕೋಚ್ ಗೋಪಿಚಂದ್ ಹಾಗೂ ಪರುಪಳ್ಳಿ ಕಶ್ಯಪ್‌ಗೆ ಟ್ವೀಟ್ ಮೂಲಕ ಧನ್ಯವಾದ ಹೇಳಿದ್ದರು.

Scroll to load tweet…

ಹಲವು ಸಭೆ ಸಮಾರಂಭ, ಡಿನ್ನರ್ ಹಾಗೂ ಪಾರ್ಟಿಗಳಲ್ಲಿ ಇವರಿಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದರೂ, ಎಲ್ಲೂ ಕೂಡ ಡೇಟಿಂಗ್ ಮಾಡುತ್ತಿರುವುದಾಗಿ ಹೇಳಿಕೊಂಡಿಲ್ಲ. ಇದೀಗ ಮದುವೆ ಕುರಿತು ಸೈನಾ ಅಥವಾ ಪರುಪಳ್ಳಿ ಕಶ್ಯಪ್ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.

View post on Instagram