ಕೌಲಾಲಂಪುರ[ಜೂ.27]: ಭಾರತದ ಒಲಿಂಪಿಕ್‌ ಪದಕ ವಿಜೇತೆ ಸೈನಾ ನೆಹ್ವಾಲ್‌, ಇಲ್ಲಿ ಮಂಗಳವಾರ ಆರಂಭಗೊಂಡ ಮಲೇಷ್ಯಾಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. 

ಮಹಿಳಾ ಸಿಂಗಲ್ಸ್‌ ಮೊದಲ ಸುತ್ತಿನ ಪಂದ್ಯದಲ್ಲಿ ಕಾಮನ್‌ವೆಲ್ತ್‌ ಗೇಮ್ಸ್‌ ಚಾಂಪಿಯನ್‌ ಸೈನಾ, ಹಾಂಕಾಂಗ್‌ನ ಯಿಪ್‌ ಪುಯ್‌ ಯಿನ್‌ ವಿರುದ್ಧ 21-12, 21-16 ನೇರ ಗೇಮ್‌ಗಳಲ್ಲಿ ಗೆದ್ದು 2ನೇ ಸುತ್ತಿಗೆ ಪ್ರವೇಶ ಪಡೆದರು. 

ಇದೇ ವೇಳೆ ಪುರುಷರ ಸಿಂಗಲ್ಸ್‌ನಲ್ಲಿ ಸಮೀರ್‌ ವರ್ಮಾ, ಇಂಡೋನೇಷ್ಯಾದ ಸುಗಿರ್ಟೋ ಎದುರು 13-21, 5-21ರಲ್ಲಿ ಸೋತು ಹೊರಬಿದ್ದರು. ಪಿ.ವಿ.ಸಿಂಧು, ಕಿದಾಂಬಿ ಶ್ರೀಕಾಂತ್‌ ಇಂದು ತಮ್ಮ ಅಭಿಯಾನ ಆರಂಭಿಸಲಿದ್ದಾರೆ.