Asianet Suvarna News Asianet Suvarna News

ಆರ್ಲಿನ್ಸ್‌ ಮಾಸ್ಟ​​ರ್ಸ್‌: ಸೈನಾ ನೆಹ್ವಾಲ್‌ಗೆ ಮೊದಲ ಸುತ್ತಲ್ಲೇ ಸೋಲು

ಆರ್ಲಿನ್ಸ್‌ ಮಾಸ್ಟ​ರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿ​ಯಲ್ಲಿ ಸೈನಾ ನೆಹ್ವಾಲ್‌ಗೆ ನಿರಾಸೆ
ಮೊದಲ ಸುತ್ತಲ್ಲೇ ಸೋತು ಹೊರ​ಬಿದ್ದ ಸೈನಾ ನೆಹ್ವಾಲ್
ಕರ್ನಾ​ಟ​ಕದ ಮಿಥುನ್‌ ಮಂಜು​ನಾಥ್‌ ಹಾಗೂ ತಾನ್ಯಾ ಹೇಮಂತ್‌ ಎರಡನೇ ಸುತ್ತು ಪ್ರವೇಶ

Saina Nehwal makes first round exit from Orleans Master Badminton tournament kvn
Author
First Published Apr 6, 2023, 10:13 AM IST

ಆರ್ಲಿ​ನ್ಸ್‌​(​ಫ್ರಾ​ನ್ಸ್‌​): ಭಾರತದ ತಾರಾ ಶಟ್ಲರ್‌ ಸೈನಾ ನೆಹ್ವಾಲ್‌ ಆರ್ಲಿನ್ಸ್‌ ಮಾಸ್ಟ​ರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿ​ಯಲ್ಲಿ ಮೊದಲ ಸುತ್ತಲ್ಲೇ ಸೋತು ಹೊರ​ಬಿ​ದ್ದಿ​ದ್ದಾರೆ. ಮಹಿಳಾ ಸಿಂಗ​ಲ್ಸ್‌​ನಲ್ಲಿ ಅವರು ಟರ್ಕಿಯ ನೆಸ್ಲಿ​ಹಾನ್‌ ವಿರುದ್ಧ 16-21, 14-21 ನೇರ ಗೇಮ್‌​ಗ​ಳಲ್ಲಿ ಪರಾ​ಭ​ವ​ಗೊಂಡರು. ಆಕರ್ಷಿ ಕಶ್ಯಪ್‌, ತಸ್ನೀಮ್‌ ಮೀರ್‌ ಕೂಡಾ ಸೋಲ​ನು​ಭ​ವಿ​ಸಿ​ದರು. ಇದೇ ವೇಳೆ ಕರ್ನಾ​ಟ​ಕದ ಮಿಥುನ್‌ ಮಂಜು​ನಾಥ್‌ ಹಾಗೂ ತಾನ್ಯಾ ಹೇಮಂತ್‌ ಕ್ರಮ​ವಾಗಿ ಪುರು​ಷ, ಮಹಿಳಾ ಸಿಂಗ​ಲ್ಸ್‌​ನಲ್ಲಿ 2ನೇ ಸುತ್ತಿ​ಗೇ​ರಿ​ದರು.

ರ‍್ಯಾಂಕಿಂಗ್‌‌: ಅಗ್ರ 10ಕ್ಕೆ ಮರ​ಳಿದ ಪಿ.ವಿ.ಸಿಂಧು

ನವ​ದೆ​ಹ​ಲಿ: ಕಳೆದ ವಾರ ಮ್ಯಾಡ್ರಿಡ್‌ ಮಾಸ್ಟ​ರ್ಸ್‌ ಟೂರ್ನಿ​ಯಲ್ಲಿ ಅತ್ಯು​ತ್ತಮ ಪ್ರದರ್ಶನ ತೋರಿದ ಭಾರ​ತದ ಶಟ್ಲರ್‌ ಪಿ.ವಿ.​ಸಿಂಧು ಬ್ಯಾಡ್ಮಿಂಟನ್‌ ವಿಶ್ವ ರ‍್ಯಾಂಕಿಂಗ್‌‌ನ ಮಹಿಳಾ ಸಿಂಗಲ್ಸ್‌ನಲ್ಲಿ ಮತ್ತೆ ಅಗ್ರ 10ರೊಳಗೆ ಸ್ಥಾನ ಗಿಟ್ಟಿ​ಸಿ​ಕೊಂಡಿ​ದ್ದಾರೆ. ಮಂಗ​ಳ​ವಾರ ಪ್ರಕ​ಟ​ಗೊಂಡ ಪರಿಷ್ಕೃತ ರ‍್ಯಾಂಕಿಂಗ್‌‌ ಪಟ್ಟಿಯಲ್ಲಿ 2 ಸ್ಥಾನ ಏರಿಕೆ ಕಂಡು 63,398 ಅಂಕ​ಗ​ಳೊಂದಿಗೆ 9ನೇ ಸ್ಥಾನ ಪಡೆ​ದಿ​ದ್ದಾ​ರೆ. 

2 ಬಾರಿ ಒಲಿಂಪಿಕ್‌ ಪದಕ ವಿಜೇತೆ ಸಿಂಧು ಕಳೆದ ವಾರ 2016ರ ಬಳಿಕ ಮೊದಲ ಬಾರಿಗೆ ಅಗ್ರ 10ರಿಂದ ಹೊರಬಿದ್ದಿದ್ದರು. ಇದೇ ವೇಳೆ ಪುರು​ಷರ ಸಿಂಗ​ಲ್ಸ್‌​ನಲ್ಲಿ ಎಚ್‌.​ಎ​ಸ್‌.​ಪ್ರ​ಣಯ್‌ ಅಗ್ರ 10ರಲ್ಲಿ​ರುವ ಏಕೈಕ ಭಾರ​ತೀಯ ಎನಿಸಿದ್ದು, ಅವರು 9ನೇ ಸ್ಥಾನ​ದ​ಲ್ಲಿ​ದ್ದಾ​ರೆ.

ವೇಟ್‌ಲಿಫ್ಟರ್‌ ಸಂಜಿತಾಗೆ ನಾಡಾ 4 ವರ್ಷ ನಿಷೇಧ

ನವ​ದೆ​ಹ​ಲಿ: ಡೋಪಿಂಗ್‌ ಪರೀ​ಕ್ಷೆ​ಯಲ್ಲಿ ವಿಫ​ಲ​ವಾದ ಹಿನ್ನೆ​ಲೆ​ಯಲ್ಲಿ 2 ಬಾರಿ ಕಾಮನ್‌ವೆಲ್ತ್‌ ಗೇಮ್ಸ್‌ ಚಿನ್ನ ವಿಜೇತ ಭಾರ​ತದ ವೇಟ್‌ಲಿಫ್ಟರ್‌ ಸಂಜಿತಾ ಚಾನುಗೆ ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ನಿಗ್ರಹ ಘಟ​ಕ​(​ನಾ​ಡಾ) 4 ವರ್ಷ ನಿಷೇಧ ಹೇರಿದೆ. 29 ವರ್ಷದ ಸಂಜಿತಾ ಅವರ ರಕ್ತ ಹಾಗೂ ಮೂತ್ರದ ಮಾದ​ರಿ​ಯನ್ನು ಕಳೆದ ವರ್ಷ ಸೆಪ್ಟೆಂಬ​ರ್‌​ನಲ್ಲಿ ರಾಷ್ಟ್ರೀಯ ಕ್ರೀಡಾ​ಕೂಟದ ವೇಳೆ ಸಂಗ್ರ​ಹಿ​ಸ​ಲಾ​ಗಿತ್ತು. ಪರೀಕ್ಷೆ ವೇಳೆ ಅವರು ನಿಷೇ​ಧಿತ ಮದ್ದು ಸೇವಿಸಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ನಾಡಾ ಕಠಿಣ ಕ್ರಮ ಕೈಗೊಂಡಿದೆ. 

ಲಿಯಾಂಡರ್‌ ಪೇಸ್ ಜತೆ ಬಾಲಿವುಡ್‌ ನಟಿ ಕಿಮ್‌ ಶರ್ಮಾ ಬ್ರೇಕಪ್‌..? 2 ವರ್ಷದ ಸಂಬಂಧಕ್ಕೆ ವಿದಾಯ

ಈ ಮೊದಲು 2018ರಲ್ಲಿ ಸಂಜಿತಾಗೆ ಅಂ.ರಾ. ವೇಟ್‌​ಲಿ​ಫ್ಟಿಂಗ್‌ ಫೆಡ​ರೇಷ​ನ್‌ ಡೋಪಿಂಗ್‌ ಪ್ರಕ​ರ​ಣ​ದಲ್ಲಿ ನಿಷೇಧ ಹೇರಿ​ತ್ತು. ಆದರೆ 2020ರಲ್ಲಿ ಅವರನ್ನು ದೋಷ​ಮು​ಕ್ತ​ಗೊ​ಳಿ​ಸ​ಲಾ​ಗಿ​ತ್ತು. ಸಂಜಿತಾ 2014ರ ಕಾಮ​ನ್‌​ವೆ​ಲ್ತ್‌ ಗೇಮ್ಸ್‌​ನಲ್ಲಿ 48 ಕೆ.ಜಿ. ವಿಭಾ​ಗ​ದಲ್ಲಿ ಚಿನ್ನ, 2018ರಲ್ಲಿ 53 ಕೆ.ಜಿ. ವಿಭಾ​ಗ​ದಲ್ಲಿ ಚಿನ್ನದ ಪದಕ ಜಯಿ​ಸಿ​ದ್ದರು.

ವನಿತಾ ಫುಟ್ಬಾ​ಲ್‌: ರಾಜ್ಯಕ್ಕೆ ಇಂದು ಮಣಿಪುರ ಸವಾ​ಲು

ಬೆಂಗಳೂರು: 27ನೇ ರಾಷ್ಟ್ರೀಯ ಮಹಿಳಾ ಫುಟ್ಬಾಲ್‌ ಚಾಂಪಿಯನ್‌ಶಿಪ್‌ನಲ್ಲಿ ನೇರ​ವಾಗಿ ಪ್ರಧಾನ ಸುತ್ತಿ​ಗೇ​ರುವ ನಿರೀ​ಕ್ಷೆ​ಯ​ಲ್ಲಿ​ರುವ ಆತಿ​ಥೇಯ ಕರ್ನಾ​ಟಕ ನಿರ್ಣಾ​ಯಕ ಕೊನೆ ಪಂದ್ಯ​ದಲ್ಲಿ ಗುರು​ವಾರ ಬಲಿಷ್ಠ ಮಣಿ​ಪುರ ವಿರುದ್ಧ ಸೆಣ​ಸಾ​ಡ​ಲಿದೆ. ಗುಂಪು-6ರಲ್ಲಿ ಸ್ಥಾನ ಪಡೆದಿರುವ ಕರ್ನಾ​ಟಕ ಹಾಗೂ 21 ಬಾರಿ ಚಾಂಪಿಯನ್‌ ಮಣಿ​ಪುರ ತಂಡ​ಗಳು ಟೂರ್ನಿ​ಯಲ್ಲಿ ಆಡಿ​ರುವ ಮೂರು ಪಂದ್ಯ​ಗ​ಳಲ್ಲಿ ಗೆಲುವು ಸಾಧಿ​ಸಿದ್ದು, ಗೋಲು ವ್ಯತ್ಯಾ​ಸ​ದಲ್ಲಿ ರಾಜ್ಯ ತಂಡ ಗುಂಪಿ​ನಲ್ಲಿ ಅಗ್ರ​ಸ್ಥಾ​ನ​ದ​ಲ್ಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ನೇರವಾಗಿ ಅಂತಿಮ ಸುತ್ತಿಗೇರಲಿದ್ದು, 2ನೇ ಸ್ಥಾನ ಪಡೆಯುವ ತಂಡ ಉಳಿದ ಗುಂಪುಗಳ ಫಲಿತಾಂಶಗಳಿಗೆ ಕಾಯಬೇಕಿದೆ.

Follow Us:
Download App:
  • android
  • ios