Asianet Suvarna News Asianet Suvarna News

ಸೈನಾ, ಪ್ರಣಯ್ ನೂತನ ರಾಷ್ಟ್ರೀಯ ಚಾಂಪಿಯನ್ಸ್

ಕರ್ನಾಟಕದ ಅಶ್ವಿನಿ ಪೊನ್ನಪ್ಪ ಮಹಿಳಾ ಹಾಗೂ ಮಿಶ್ರ ಡಬಲ್ಸ್ ಚಾಂಪಿಯನ್ ಪಟ್ಟಕ್ಕೇರಿದ್ದಾರೆ. ಸಿಕ್ಕಿ ರೆಡ್ಡಿ ಜತೆ ಮಹಿಳಾ ಡಬಲ್ಸ್ ಗೆದ್ದ ಅಶ್ವಿನಿ, ಸಾತ್ವಿಕ್ ಸಾಯಿರಾಜ್ ಜತೆ ಮಿಶ್ರ ಡಬಲ್ಸ್ ಪ್ರಶಸ್ತಿ ಎತ್ತಿಹಿಡಿದರು.

Saina Nehwal HS Prannoy win national titles
  • Facebook
  • Twitter
  • Whatsapp

ನಾಗ್ಪುರ(ನ.09): ನೂತನ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌'ಗಳಾಗಿ ಸೈನಾ ನೆಹ್ವಾಲ್ ಹಾಗೂ ಎಚ್.ಎಸ್.ಪ್ರಣಯ್ ಹೊರಹೊಮ್ಮಿದ್ದಾರೆ. ಇಲ್ಲಿ ನಡೆದ ರೋಚಕ ಫೈನಲ್ ಕದನದಲ್ಲಿ ಪಿ.ವಿ.ಸಿಂಧು ವಿರುದ್ಧ ಸೈನಾ ನೆಹ್ವಾಲ್ ನೇರ ಗೇಮ್‌'ಗಳಲ್ಲಿ ಗೆದ್ದರೆ, ಕಿದಾಂಬಿ ಶ್ರೀಕಾಂತ್‌'ರನ್ನು ಪ್ರಣಯ್ ಸೋಲಿಸಿದರು.

ಮಾಜಿ ನಂಬರ್ 1 ಸೈನಾ, ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಸಿಂಧು ವಿರುದ್ಧ 21-17, 27-25 ಗೇಮ್‌'ಗಳಲ್ಲಿ ಗೆಲುವು ಸಾಧಿಸಿದರು. 54 ನಿಮಿಷಗಳ ಕಾಲ ನಡೆದ ರೋಚಕ ಪಂದ್ಯವನ್ನು ಗೆದ್ದ ಸೈನಾ, 2007ರ ಬಳಿಕ ರಾಷ್ಟ್ರೀಯ ಚಾಂಪಿಯನ್‌'ಶಿಪ್ ಗೆದ್ದರು.

ಗೆಲುವಿನ ಬಳಿಕ ಮಾತನಾಡಿದ ಸೈನಾ ‘ಇಂದು ನಾನಾಡಿದ ಆಟ, ನನಗೇ ಆಶ್ಚರ್ಯ ಉಂಟು ಮಾಡಿದೆ. ಸಿಂಧು ಹೊಡೆಯುತ್ತಿದ್ದ ಕಠಿಣ ಶಾಟ್‌'ಗಳನ್ನು ಸುಲಭವಾಗಿ ಎದುರಿಸಿದ್ದು ಖುಷಿ ನೀಡಿದೆ’ ಎಂದರು.

ಇನ್ನು ವಿಶ್ವ ನಂ.2 ಶ್ರೀಕಾಂತ್ ವಿರುದ್ಧ ಪ್ರಣಯ್ 21-15, 16-21, 21-07 ಗೇಮ್‌'ಗಳಲ್ಲಿ ಜಯಗಳಿಸಿದರು. ಪ್ರಣಯ್ ‘ಈ ಗೆಲುವು ಬಹಳ ಮಹತ್ವದ್ದು. ಶ್ರೀಕಾಂತ್'ರನ್ನು ಫೈನಲ್‌ನಲ್ಲಿ ಸೋಲಿಸಿದೆ ಎನ್ನುವ ಹೆಮ್ಮೆ ಇದೆ’ ಎಂದರು. ಈ ಸೋಲಿನೊಂದಿಗೆ ಶ್ರೀಕಾಂತ್‌'ರ ಸತತ 13 ಪಂದ್ಯಗಳ ಗೆಲುವಿನ ಓಟಕ್ಕೆ ತೆರೆ ಬಿದ್ದಿದೆ.

ಅಶ್ವಿನಿಗೆ ‘ಡಬಲ್’ ಪ್ರಶಸ್ತಿ:

ಕರ್ನಾಟಕದ ಅಶ್ವಿನಿ ಪೊನ್ನಪ್ಪ ಮಹಿಳಾ ಹಾಗೂ ಮಿಶ್ರ ಡಬಲ್ಸ್ ಚಾಂಪಿಯನ್ ಪಟ್ಟಕ್ಕೇರಿದ್ದಾರೆ. ಸಿಕ್ಕಿ ರೆಡ್ಡಿ ಜತೆ ಮಹಿಳಾ ಡಬಲ್ಸ್ ಗೆದ್ದ ಅಶ್ವಿನಿ, ಸಾತ್ವಿಕ್ ಸಾಯಿರಾಜ್ ಜತೆ ಮಿಶ್ರ ಡಬಲ್ಸ್ ಪ್ರಶಸ್ತಿ ಎತ್ತಿಹಿಡಿದರು.

Follow Us:
Download App:
  • android
  • ios