ರಿಯೊ ಒಲಿಂಪಿಕ್ಸ್ ನಂತರ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಸೈನಾ, ಶಸ್ತ್ರಚಿಕಿತ್ಸೆಗೆ ಒಳಾಗಾಗಿ ವಿಶ್ರಾಂತಿ ಪಡೆದಿದ್ದಾರೆ. ಕೋಚ್ ವಿಮಲ್ ಕುಮಾರ್ ಬಳಿ ತರಬೇತಿ ಪಡೆದಿರುವ ಸೈನಾ ಈ ಟೂರ್ನಿಯಲ್ಲಿ ಪ್ರಭಾವಿ ಪ್ರದರ್ಶನ ನೀಡುವ ಹುಮ್ಮಸ್ಸಿನಲ್ಲಿದ್ದಾರೆ.
ಜುವು(ಚೀನಾ)(ನ.15): ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, 3 ತಿಂಗಳ ಬಳಿಕ ಮತ್ತೆ ಅಂಗಣಕ್ಕೆ ಮರಳುತ್ತಿದ್ದಾರೆ. ಇನ್ನೊಂದೆಡೆ ರಿಯೊ ಕೂಟದ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧು ಮೊದಲ ಚೀನಾ ಟ್ರೋಫಿ ಜಯಿಸುವ ಉತ್ಸಾಹದಲ್ಲಿದ್ದಾರೆ.
ಬುಧವಾರದಿಂದ ಚೀನಾ ಓಪನ್ ಸೂಪರ್ ಸಿರೀಸ್ ಪ್ರಿಮೀಯರ್ ಬ್ಯಾಡ್ಮಿಂಟನ್ ಟೂರ್ನಿ ಆರಂಭವಾಗಲಿದೆ. ರಿಯೊ ಒಲಿಂಪಿಕ್ಸ್ ನಂತರ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಸೈನಾ, ಶಸ್ತ್ರಚಿಕಿತ್ಸೆಗೆ ಒಳಾಗಾಗಿ ವಿಶ್ರಾಂತಿ ಪಡೆದಿದ್ದಾರೆ. ಕೋಚ್ ವಿಮಲ್ ಕುಮಾರ್ ಬಳಿ ತರಬೇತಿ ಪಡೆದಿರುವ ಸೈನಾ ಈ ಟೂರ್ನಿಯಲ್ಲಿ ಪ್ರಭಾವಿ ಪ್ರದರ್ಶನ ನೀಡುವ ಹುಮ್ಮಸ್ಸಿನಲ್ಲಿದ್ದಾರೆ.
ಕಳೆದ ವರ್ಷ ಸೈನಾ, ಚೀನಾ ಓಪನ್‌ನಲ್ಲಿ ರನ್ನರ್ ಅಪ್‌ಗೆ ತೃಪ್ತಿ ಪಟ್ಟಿದ್ದರು.
