ಗೆಳತಿ ಸಾಗರಿಕಾ ಕೈಹಿಡಿದ ಜಹೀರ್ ಖಾನ್
ನವೆಂಬರ್ 27ರಂದು ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ವೇಳೆ ಆಪ್ತರು, ಕ್ರಿಕೆಟಿಗರು, ಕೆಲವು ಸೆಲಿಬ್ರಿಟಿಗಳು ಭಾಗವಹಿಸಲಿದ್ದಾರೆ.
ಮುಂಬೈ(ನ.23): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಜಹೀರ್ ಖಾನ್ ತಮ್ಮ ಬಹುಕಾಲದ ಗೆಳತಿ, ‘ಚಕ್ ದೇ ಇಂಡಿಯಾ’ ಸಿನಿಮಾ ಖ್ಯಾತಿಯ ನಟಿ ಸಾಗರಿಕಾ ಘಾಟ್ಗೆ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ಮುಂಬೈನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಈ ತಾರಾ ಜೋಡಿ ವೈವಾಹಿಕ ಜೀವನಕ್ಕೆ ಕಾಲಿರಿಸಿದರು. ಬೆಳಗ್ಗೆ ವಿವಾಹ ನೋಂದಣಿ ಕಚೇರಿಗೆ ತೆರಳಿದ ನವದಂಪತಿ ವಿವಾಹ ನೋಂದಣಿ ಮಾಡಿಸಿದರು. ಈ ವೇಳೆ ಜಹೀರ್‌ಖಾನ್ ಹಾಗೂ ಸಾಗರಿಕಾ ಅವರ ಕುಟುಂಬದ ಸದಸ್ಯರು ಹಾಗೂ ಕೆಲ ಆಪ್ತರು ಮಾತ್ರ ಉಪಸ್ಥಿತರಿದ್ದರು.
ನವೆಂಬರ್ 27ರಂದು ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ವೇಳೆ ಆಪ್ತರು, ಕ್ರಿಕೆಟಿಗರು, ಕೆಲವು ಸೆಲಿಬ್ರಿಟಿಗಳು ಭಾಗವಹಿಸಲಿದ್ದಾರೆ.
With the saali & the gharwali ❤️ ..
— Vidya M Malavade (@vidyaMmalavade) 23 November 2017
my newest bro in law 🤗🤗. #happycouple .. #love & #blessings #sagarikaghatge #zaheerkhan pic.twitter.com/YjrsuHiZid
ವಿವಾಹ ಬಂಧನಕ್ಕೆ ಒಳಗಾದ ಈ ಜೋಡಿ ವಸ್ತ್ರ ಕೂಡಾ ಸಾಕಷ್ಟು ಸಿಂಪಲ್ ಆಗಿತ್ತು. ಸಾಗರಿಕಾ ಕೆಂಪು ವರ್ಣದ ಸೀರೆಯಲ್ಲಿ ಮಿಂಚುತ್ತಿದ್ದರೆ, ಜಹೀರ್‌ಖಾನ್ ಪೈಜಾಮದಲ್ಲಿ ಎಲ್ಲರ ಗಮನ ಸೆಳೆದರು.