ಹಲವು ಪಂದ್ಯಗಳಿಂದ ವಿರಾಮ ಪಡೆದಿದ್ದ ರಾಜೇಶ್ವರಿ ಅವರು ವಿಶ್ವಕಪ್'ನಲ್ಲಿ ಅವಕಾಶ ದೊರಕಿದ ಮೊದಲ ಪಂದ್ಯದಲ್ಲಿಯೇ 5 ವಿಕೇಟ್ ಪಡೆದು ಪಂದ್ಯ ಗೆಲ್ಲಲು ಕಾರಣವಾಗಿದ್ದರು.

ಮಹಿಳಾ ವಿಶ್ವಕಪ್'ನ 2017ರ ನ್ಯೂಜಿಲ್ಯಾಂಡ್ ವಿರುದ್ಧದ ಲೀಗ್ ಪಂದ್ಯದಲ್ಲಿ 5 ವಿಕೇಟ್ ಪಡೆಯುವ ಮೂಲಕ ಭಾರತ ತಂಡವನ್ನು ಸೆಮಿಫೈನಲ್ ತಲುಪಲು ಕಾರಣರಾದ ಕನ್ನಡತಿ ಬಿಜಾಪುರದ ರಾಜೇಶ್ವರಿ ಗಾಯಕ್'ವಾಡ್ ಅವರ ಸಾಧನೆ ಹಾಗೂ ಮಗಳನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಪ್ರೋತ್ಸಾಹ ನೀಡಿದ ಅವರ ತಂದೆಯ ಬಗ್ಗೆ ಕ್ರಿಕೆಟ್'ನ ದಂತಕತೆ ಸಚಿನ್ ತೆಂಡೂಲ್ಕರ್ ಮೆಚ್ಚುಗೆ ವ್ಯಕ್ತಪಡಿಸಿ' ಹೆಮ್ಮೆಯ ಮಗಳನ್ನು ಪಡೆದ ನೀವೇ ಅದೃಷ್ಟಶಾಲಿ'ಎಂದು ಟ್ವೀಟ್ ಮಾಡಿದ್ದಾರೆ.

ಹಲವು ಪಂದ್ಯಗಳಿಂದ ವಿರಾಮ ಪಡೆದಿದ್ದ ರಾಜೇಶ್ವರಿ ಅವರು ವಿಶ್ವಕಪ್'ನಲ್ಲಿ ಅವಕಾಶ ದೊರಕಿದ ಮೊದಲ ಪಂದ್ಯದಲ್ಲಿಯೇ 5 ವಿಕೇಟ್ ಪಡೆದು ಪಂದ್ಯ ಗೆಲ್ಲಲು ಕಾರಣವಾಗಿದ್ದರು. ಸೆಮಿಫೈನಲ್'ನಲ್ಲೂ ಪ್ರಮುಖ ಬ್ಯಾಟ್ಸ್'ಮೆನ್ ವಿಲ್ಲಾನಿ ಅವರ ವಿಕೇಟ್ ಪಡೆದಿದ್ದರು.