1998ರ ಶಾರ್ಜಾ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಸತತ 2 ಶತಕ ಬಾರಿಸಿದ್ದರು. ಈ ಆಟವನ್ನು ಮನಸೋತಿದ್ದ ಬ್ರಾಡ್ಮನ್ ತಮ್ಮ 90ನೇ ಹುಟ್ಟುಹಬ್ಬಕ್ಕೆ ಸಚಿನ್ ಅವರನ್ನು ಆಹ್ವಾನಿಸಿದ್ದರು.
ಮುಂಬೈ(ಆ.27): ಕ್ರಿಕೆಟ್ ದಿಗ್ಗಜ ಸರ್ ಡೊನಾಲ್ಡ್ ಬ್ರಾಡ್ಮನ್ ಅವರ 109ನೇ ಜನ್ಮ ವಾರ್ಷಿಕೋತ್ಸವಕ್ಕೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಶುಭಾಶಯ ಕೋರಿ ಟ್ವಿಟರ್ ಹಾಗೂ ಇನ್‌ಸ್ಟಾಗ್ರಾಂ ಮೂಲಕ ಭಾವನಾತ್ಮಕ ಪೋಸ್ಟ್ ಒಂದನ್ನು ಹಾಕಿದ್ದಾರೆ. ಇಬ್ಬರು ಜೊತೆಗಿರುವ ಫೋಟೊವೊಂದನ್ನು ಹಾಕಿರುವ ಸಚಿನ್ ‘ಟು ಒನ್ ಅಂಡ್ ಓನ್ಲಿ... ಹ್ಯಾಪಿ ಬರ್ತ್‌ಡೇ ಸರ್.ಬ್ರಾಡ್ಮನ್’ ಎಂದು ಬರೆದಿದ್ದಾರೆ.
1998ರ ಶಾರ್ಜಾ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಸತತ 2 ಶತಕ ಬಾರಿಸಿದ್ದರು. ಈ ಆಟವನ್ನು ಮನಸೋತಿದ್ದ ಬ್ರಾಡ್ಮನ್ ತಮ್ಮ 90ನೇ ಹುಟ್ಟುಹಬ್ಬಕ್ಕೆ ಸಚಿನ್ ಅವರನ್ನು ಆಹ್ವಾನಿಸಿದ್ದರು. ಆ ಸಂದರ್ಭದಲ್ಲಿ ತೆಗೆಸಿಕೊಂಡಿದ್ದ ಫೋಟೋವನ್ನು ಸಚಿನ್ ಟ್ವೀಟ್ ಮಾಡಿದ್ದಾರೆ.
