ಇದೀಗ ಈ ಕೂಗು ಚಿತ್ರಮಂದಿಗಳನ್ನು ತಲುಪಿದ್ದು, ಬಹಳ ಸಂತೋಷವಾಗುತ್ತಿದೆ ಎಂದಿದ್ದಾರೆ.
ಮುಂಬೈ(ಮೇ.11): ಸಚಿನ್ ಎ ಬಿಲಿಯನ್ ಡ್ರೀಮ್ಸ್' ಚಿತ್ರದ ಸಚಿನ್.. ಸಚಿನ್.. ಹಾಡನ್ನು ಕೇಳುತ್ತಿದ್ದರೇ ಅಮ್ಮನ ನೆನಪಾಗುತ್ತದೆ ಎಂದು ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ತಿಳಿಸಿದ್ದಾರೆ.
ಮೊದಲ ಬಾರಿ ಹಾಡನ್ನು ಆಲಿಸಿದಾಗ ಏನನ್ನಿಸಿತು ಎಂಬ ಪ್ರಶ್ನೆಗೆ ಪ್ರತಿಕ್ರಿಸಿದ ಸಚಿನ್, ‘‘ನನಗೆ ತಕ್ಷಣ ನನ್ನ ತಾಯಿಯ ನೆನಪಾಯಿತು. ನಾನು ಸಣ್ಣವನಿದ್ದಾಗ ಮನೆಯ ಹೊರಾಂಗಣದಲ್ಲಿ ಆಡುತ್ತಿರುವ ಸಮಯದಲ್ಲಿ ನನ್ನ ತಾಯಿ ಸಚಿನ್.. ಸಚಿನ್.. ಮನೆಗೆ ಬಾ ಎಂದು ಕೂಗುತ್ತಿದ್ದರು'' ಎಂದು ತಮ್ಮ ಮನದಾಳದ ಮಾತನ್ನು ತೆರೆದಿಟ್ಟಿದ್ದಾರೆ.
ಪ್ರತಿಬಾರಿ ಬ್ಯಾಂಟಿಂಗ್'ಗೆ ಆಗಮಿಸುತ್ತಿದ್ದಂತೆ ಇಡೀ ಕ್ರೀಡಾಂಗಣದ ತುಂಬಾ ಸಚಿನ್.. ಸಚಿನ್.. ಎಂದು ಅಭಿಮಾನಿಗಳು ಉದ್ಘಾರ ಮೈದಾನದ ಸುತ್ತ ಮಾರ್ದನಿಸುತ್ತಿತ್ತು. ಆಟದ ಬಳಿಕವೂ ಮತ್ತೆ ಅದೇ ಕೂಗು ಕೇಳಿ ಬರುತ್ತದೆ ಎಂದು ಕನಸಿನಲ್ಲಿಯೂ ನೆನೆಸಿರಲಿಲ್ಲ. ಇದೀಗ ಈ ಕೂಗು ಚಿತ್ರಮಂದಿಗಳನ್ನು ತಲುಪಿದ್ದು, ಬಹಳ ಸಂತೋಷವಾಗುತ್ತಿದೆ ಎಂದಿದ್ದಾರೆ.
