ಕೊಹ್ಲಿ ಈ ಸಾಧನೆ ಮಾಡಿದರೆ ತೆಂಡುಲ್ಕರ್'ರಿಂದ ಸಿಗತ್ತೆ ಈ ಅಪರೂಪದ ಗಿಫ್ಟ್..!

Sachin Tendulkar Makes Special Promise To India Captain Virat Kohli
Highlights

2017ರ ಆರಂಭದಿಂದ ಇಲ್ಲಿಯವರೆಗೆ ಕೊಹ್ಲಿ 35 ಏಕದಿನ ಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್(30) ಶ್ರೀಲಂಕಾದ ಸನತ್ ಜಯಸೂರ್ಯ ಅವರನ್ನು ಹಿಂದಿಕ್ಕಿದ್ದಾರೆ. ಇನ್ನು ಕೇವಲ 15 ಶತಕ ಬಾರಿಸಿದರೆ ಸಚಿನ್'ರಿಂದ ಶಾಂಪೇನ್ ಬಾಟಲ್ ಪಡೆಯಬಹುದಾಗಿದೆ.

ಮುಂಬೈ(ಏ.25): ವಿರಾಟ್ ಕೊಹ್ಲಿ, ತಮ್ಮ 49 ಏಕದಿನ ಶತಕಗಳ ದಾಖಲೆ ಮುರಿದರೆ ಅವರಿಗೊಂದು ಶಾಂಪೇನ್ ಬಾಟಲ್ ಉಡುಗೊರೆಯಾಗಿ ನೀಡುವುದಾಗಿ ಸಚಿನ್ ತೆಂಡುಲ್ಕರ್ ಹೇಳಿದ್ದಾರೆ.

ಖಾಸಗಿ ಕಾರ್ಯಕ್ರಮವೊಂದರಲ್ಲಿ, ‘ಕೊಹ್ಲಿ ನಿಮ್ಮ ಶತಕಗಳ ದಾಖಲೆ ಮುರಿದರೆ 50 ಶಾಂಪೇನ್ ಬಾಟಲ್‌'ಗಳನ್ನು ಕಳುಹಿಸುತ್ತೀರಾ’ ಎಂದು ನಿರೂಪಕ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿನ್, ‘ಬಾಟಲ್‌'ಗಳನ್ನು ಕಳುಹಿಸುವುದಿಲ್ಲ, ಬದಲಾಗಿ ನಾನೇ ಖುದ್ದಾಗಿ ಹೋಗಿ ಅವರಿಗೆ ಶಾಂಪೇನ್ ನೀಡುತ್ತೇನೆ’ ಎಂದರು.

loader