ಇದಷ್ಟೇ ಅಲ್ಲದೇ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಸಚಿನ್ ತೆಂಡೂಲ್ಕರ್ ದ್ವಿಶತಕ ಬಾರಿಸಿದಾಗ ನಾನ್'ಸ್ಟ್ರೈಕ್'ನಲ್ಲಿ ಮಾಹಿ ಸಚಿನ್'ಗೆ ಸಾಥ್ ನೀಡಿದ್ದರು.
ಮುಂಬೈ(ಜ.05): ನಾಯಕನಾಗಿ ಟೀಂ ಇಂಡಿಯಾದ ಯಶಸ್ವಿಯಾಗಿ ಮುನ್ನಡೆಸಿ ನಾಯಕತ್ವ ಸ್ಥಾನದಿಂದ ಕೆಳಗಿಳಿದಿರುವ ಮಹೇಂದ್ರ ಸಿಂಗ್ ಧೋನಿಯನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕೊಂಡಾಡಿದ್ದಾರೆ.
ಧೋನಿ ಕೈಗೊಂಡ ನಿರ್ಧಾರವನ್ನು, ವೃತ್ತಿ ಜೀವನದಲ್ಲಿ ನಾಯಕನಾಗಿ ಸಾಧಿಸಿದ ಸಾಧನೆಯನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
ಟಿ-20 ವಿಶ್ವಕಪ್, ಏಕದಿನ ವಿಶ್ವಕಪ್'ನಲ್ಲಿ ನಾಯಕನಾಗಿ ನೀವು ಸಾಧಿಸಿರುವ ಯಶಸ್ಸಿಗೆ ಅಭಿನಂದನೆಗಳು. ಆಕ್ರಮಣಕಾರಿ ಆಟ, ಕೂಲ್ ಕ್ಯಾಪ್ಟನ್'ಶಿಪ್ ಮೂಲಕ ನೀವು ಬೆಳೆದುನಿಂತ ರೀತಿಯೇ ಅಮೋಘ. ಮೈದಾನದಲ್ಲಿ ನಿಮ್ಮ ಮನೋರಂಜನಾತ್ಮಕ ಆಟ ಇದೇರೀತಿ ಮುಂದುವರೆಯಲಿ' ಎಂದು ಮುಂಬೈಕರ್ ಶುಭಹಾರೈಸಿದ್ದಾರೆ.
ಸಚಿನ್ ತೆಂಡೂಲ್ಕರ್ ಪಾಲಿಗೆ ಗಗನ ಕುಸುಮವಾಗಿದ್ದ ಏಕದಿನ ವಿಶ್ವಕಪ್'ನ್ನು, ತವರಿನಲ್ಲೇ ನಡೆದ 2011ರ ವಿಶ್ವಕಪ್ ಟೂರ್ನಿಯಲ್ಲಿ ಧೋನಿ ನಾಯಕತ್ವದಲ್ಲಿ ವಿಶ್ವಕಪ್ ಎತ್ತಿಹಿಡಿಯಿತು. ಈ ಮೂಲಕ ಸಚಿನ್ ತಮ್ಮ ಬಹುಕಾಲದ ಕನಸನ್ನು ನನಸಾಗಿಸಿಕೊಂಡರು.
ಟಿ-20 ವಿಶ್ವಕಪ್, ಏಕದಿನ ವಿಶ್ವಕಪ್ ಹಾಗೂ ಚಾಂಪಿಯನ್ ಟ್ರೋಫಿಯನ್ನು ಗೆದ್ದುಕೊಟ್ಟ ಟೀಂ ಇಂಡಿಯಾದ ಏಕೈಕ ನಾಯಕ ಎಂಬ ಕೀರ್ತಿಗೆ ಮಹೇಂದ್ರ ಸಿಂಗ್ ಧೋನಿ ಭಾಜನರಾಗಿದ್ದಾರೆ.
ಇದಷ್ಟೇ ಅಲ್ಲದೇ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಸಚಿನ್ ತೆಂಡೂಲ್ಕರ್ ದ್ವಿಶತಕ ಬಾರಿಸಿದಾಗ ನಾನ್'ಸ್ಟ್ರೈಕ್'ನಲ್ಲಿ ಮಾಹಿ ಸಚಿನ್'ಗೆ ಸಾಥ್ ನೀಡಿದ್ದರು.
