ತೆಂಡೂಲ್ಕರ್ ಅವರ 24 ವರ್ಷಗಳ ಕ್ರಿಕೆಟ್‌ ಬದುಕು ಹಾಗೂ ಕ್ರಿಕೆಟ್‌'ನಿಂದಾಚೆ ಅವರು ಮಾಡುತ್ತಿರುವ ಸಾಮಾಜಿಕ ಕಾರ್ಯಗಳನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಯಿತು.

ಲಂಡನ್‌(ಮೇ.07): 7ನೇ ವಾರ್ಷಿಕ ಏಷ್ಯಾ ಪ್ರಶಸ್ತಿ ಸಮಾರಂಭದಲ್ಲಿ ಭಾರತದ ಮಾಜಿ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ಗೆ ಫೆಲೋಶಿಪ್‌ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ತೆಂಡೂಲ್ಕರ್ ಅವರ 24 ವರ್ಷಗಳ ಕ್ರಿಕೆಟ್‌ ಬದುಕು ಹಾಗೂ ಕ್ರಿಕೆಟ್‌'ನಿಂದಾಚೆ ಅವರು ಮಾಡುತ್ತಿರುವ ಸಾಮಾಜಿಕ ಕಾರ್ಯಗಳನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಯಿತು.

ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಸಚಿನ್‌ ‘‘ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿ​ರುವುದು ಖುಷಿ ನೀಡುತ್ತಿದೆ. ಮೂಲಸೌಕರ್ಯಗಳ ಕೊರತೆ ಎದುರಿಸುತ್ತಿರುವವರಿಗೆ ಸಂಘ ಸಂಸ್ಥೆಗಳ ಜತೆಗೂಡಿ ನೆರವು ನೀಡಲು ಹಲವು ಯೋಜನೆಗಳನ್ನು ರೂಪಿಸಿದ್ದೇನೆ. ಸೌರಶಕ್ತಿ ಬಳಸಿ ಬಡಜನರಿಗೆ ವಿದ್ಯುತ್‌ ನೀಡುವುದು ನನ್ನ ಮುಖ್ಯ ಉದ್ದೇಶವಾಗಿದೆ'' ಎಂದರು.