ಗ್ವಾಲಿಯರ್‌'ನ ಕ್ಯಾಪ್ಟನ್ ರೂಪ್ ಸಿಂಗ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸಚಿನ್ ಅಜೇಯ 200ರನ್‌ ಬಾರಿಸಿದ್ದರು.

ಮುಂಬೈ(ಫೆ.24): ಇಂದಿಗೆ ಸರಿಯಾಗಿ ಅಂದರೆ ಫೆ.24, 2010ರಲ್ಲಿ ಕ್ರಿಕೆಟ್ ಇತಿಹಾಸದಲ್ಲೊಂದು ಅಪರೂಪದ ಮೈಲಿಗಲ್ಲೊಂದು ಸ್ಥಾಪನೆಯಾದ ದಿನ. ಅದನ್ನು ಸ್ಥಾಪಿಸಿದ್ದು ಕ್ರಿಕೆಟ್ ದೇವರು ಎಂದೇ ಹೆಸರಾದ ಸಚಿನ್ ತೆಂಡೂಲ್ಕರ್...

ಹೌದು ಭಾರತ ಕ್ರಿಕೆಟ್ ತಂಡದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸರಿಯಾಗಿ 7 ವರ್ಷಗಳ ಹಿಂದೆ ಏಕದಿನ ಕ್ರಿಕೆಟ್‌'ನಲ್ಲಿ ಮೊಟ್ಟ ಮೊದಲ ಬಾರಿಗೆ ದ್ವಿಶತಕ ಸಾಧನೆ ಮಾಡಿದ ದಿನವಾಗಿತ್ತು. ಗ್ವಾಲಿಯರ್‌'ನ ಕ್ಯಾಪ್ಟನ್ ರೂಪ್ ಸಿಂಗ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸಚಿನ್ ಅಜೇಯ 200ರನ್‌ ಬಾರಿಸಿದ್ದರು. ಆ ಪಂದ್ಯದಲ್ಲಿ ಭಾರತದ ಮೊತ್ತ 3 ವಿಕೆಟ್‌ಗೆ 401 ದಾಖಲಿಸಿತ್ತು. ಈ ಪಂದ್ಯವನ್ನು ಭಾರತ 153ರನ್‌ಗಳಿಂದ ಗೆದ್ದಿತ್ತು.

ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್‌'ನಲ್ಲಿ ದ್ವಿಶತಕ ಗಳಿಸಿದ್ದ ಸಚಿನ್ ಆ ದಿನ ರಾತ್ರಿ ನಿದ್ದೆ ಮಾಡಿರಲಿಲ್ಲವಂತೆ. ರಾತ್ರಿ ಹೊಟೇಲ್‌'ಗೆ ಹೋದಾಗ ಸಾಕಷ್ಟು ಸುಸ್ತಾಗಿದ್ದೆ. ಆದರೂ ಉತ್ಸಾಹ ಹೆಚ್ಚಾಗಿದ್ದರಿಂದ ನಿದ್ದೆ ಬಂದಿರಲಿಲ್ಲ. ಬೆಡ್‌ನಿಂದ ಎದ್ದ ನಾನು ಮೊಬೈಲ್ ನೋಡಲು ನಿರ್ಧರಿಸಿದ್ದೆ. ಮೊಬೈಲ್‌'ನಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದಿತ್ತು. ಇದಕ್ಕೆ ಪ್ರತಿಕ್ರಿಯಿಸುವುದರಲ್ಲಿಯೇ 2 ಗಂಟೆಗಳನ್ನು ಕಳೆದಿದ್ದೆ ಎಂದು ಸಚಿನ್ ತಮ್ಮ ಆಟೋ ಬಯೋಗ್ರಾಫಿ ‘ಫ್ಲೇಯಿಂಗ್ ಇಟ್ ಮೈ ವೇ’ಯಲ್ಲಿ ಬರೆದುಕೊಂಡಿದ್ದಾರೆ.

ಸಚಿನ್ ದಾಖಲೆ ಕ್ಷಣವನ್ನು ಮುಂಬೈ ಇಂಡಿಯನ್ಸ್ ಟ್ವೀಟ್ ಮಾಡಿದ್ದು ಹೀಗೆ..

Scroll to load tweet…