ಮಂಗಳವಾರ ಹುಟ್ಟುಹಬ್ಬ ಆಚರಿಸಿಕೊಂಡ ಆಸ್ಟ್ರೇಲಿಯಾ ಮಾಜಿ ವೇಗಿ ಡೇಮಿಯನ್ ಫ್ಮೆಮಿಂಗ್'ಗೆ ಟ್ವೀಟರ್'ನಲ್ಲಿ ಶುಭ ಕೋರಿರುವ ಕ್ರಿಕೆಟ್ ಆಸ್ಟ್ರೇಲಿಯಾ ವಿಡಿಯೋವೊಂದನ್ನು ಹಾಕಿದೆ. ಅದು ಫ್ಲೆಮಿಂಗ್, ಸಚಿನ್'ರನ್ನು ಬೌಲ್ಡ್ ಮಾಡಿದ ವಿಡಿಯೋ ಆಗಿರುವ ಕಾರಣ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನವದೆಹಲಿ: ಸಚಿನ್ ಹುಟ್ಟುಹಬ್ಬದಂದು ಕ್ರಿಕೆಟ್ ಆಸ್ಟ್ರೇಲಿಯಾ ಎಡವಟ್ಟೊಂದನ್ನು ಮಾಡಿದ್ದು, ಸಾಮಾಜಿಕ ತಾಣಗಳಲ್ಲಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಮಂಗಳವಾರ ಹುಟ್ಟುಹಬ್ಬ ಆಚರಿಸಿಕೊಂಡ ಆಸ್ಟ್ರೇಲಿಯಾ ಮಾಜಿ ವೇಗಿ ಡೇಮಿಯನ್ ಫ್ಲೆಮಿಂಗ್'ಗೆ ಟ್ವೀಟರ್'ನಲ್ಲಿ ಶುಭ ಕೋರಿರುವ ಕ್ರಿಕೆಟ್ ಆಸ್ಟ್ರೇಲಿಯಾ ವಿಡಿಯೋವೊಂದನ್ನು ಹಾಕಿದೆ. ಅದು ಫ್ಲೆಮಿಂಗ್, ಸಚಿನ್'ರನ್ನು ಬೌಲ್ಡ್ ಮಾಡಿದ ವಿಡಿಯೋ ಆಗಿರುವ ಕಾರಣ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಸಚಿನ್ ಹುಟ್ಟುಹಬ್ಬದ ದಿನ ಈ ರೀತಿ ಟ್ವೀಟ್ ಮಾಡಿ ಕಾಲೆಳೆಯುವ ನಿಮ್ಮ ಬುದ್ಧಿಗೆ ನಾಚಿಕೆಯಾಗಬೇಕು, ಫ್ಲೆಮಿಂಗ್ ಬೇರೆ ಕ್ರಿಕೆಟರ್ ಅನ್ನು ಔಟ್ ಮಾಡಿದ ವಿಡಿಯೋ ಹಾಕಿ ಶುಭ ಕೋರಬಹುದಿತ್ತು’ ಎಂದು ಅಭಿಮಾನಿಗಳು ಟೀಕಿಸಿದ್ದಾರೆ.
