Asianet Suvarna News Asianet Suvarna News

ಸದ್ದು ಮಾಡುತ್ತಿದೆ ಸಚ್ಚಿನ್.. ಸಚ್ಚಿನ್ ಸಾಂಗ್..!

ಹಾಡು ಬಿಡುಗಡೆಯ ಬಳಿಕ ಮಾತನಾಡಿದ ಸಚಿನ್, 'ಇದು ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ' ಎಂದಿದ್ದಾರೆ.  

Sachin Sachin song AR Rahman and Sukhwinder Singh create an anthem for Sachin Tendulkar biographical film
  • Facebook
  • Twitter
  • Whatsapp

ಮುಂಬೈ(ಮೇ.09): ಇದೇ ತಿಂಗಳು ಬಿಡುಗಡೆಗೆ ಕಾಯುತ್ತಿರುವ ಸಚಿನ್ ಎ ಬಿಲಿಯನ್ ಡ್ರೀಮ್ಸ್ ಚಿತ್ರದ ಸಚಿನ್...ಸಚಿನ್ ಹಾಡು ಈಗಷ್ಟೇ ಸ್ವತಃ ಸಚಿನ್ ತೆಂಡೂಲ್ಕರ್ ಬಿಡುಗಡೆ ಮಾಡಿದ್ದು, ಒಂದು ಗಂಟೆಯಲ್ಲೇ ಹಾಡು ಭಾರೀ ಜನಪ್ರಿಯತೆ ಗಿಟ್ಟಿಸಿಕೊಂಡಿದೆ.

ಯ್ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಸಚಿನ್ ಎ ಬಿಲಿಯನ್ ಡ್ರೀಮ್ಸ್ ಚಿತ್ರದ ಸಚ್ಚಿನ್... ಸಚ್ಚಿನ್ ಹಾಡು ಕೇವಲ ಒಂದು ಗಂಟೆಯಲ್ಲೇ 15 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಹಾಡು ಬಿಡುಗಡೆಯ ಬಳಿಕ ಮಾತನಾಡಿದ ಸಚಿನ್, 'ಇದು ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ' ಎಂದಿದ್ದಾರೆ. 

ಇರ್ಷಾದ್ ಕಮೀಲ್ ಬರೆದಿರುವ ಈ ಗೀತೆಯನ್ನ ಬಾಲಿವುಡ್‌'ನ ಖ್ಯಾತ ಗಾಯಕ ಸುಖ್ವಿಂದರ್ ಸಿಂಗ್ ಹಾಡಿದ್ದು, ಎ.ಆರ್ ರಹಮಾನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರ ಇದೇ ಮೇ 26ರಂದು ತೆರೆಗೆ ಅಪ್ಪಳಿಸಲಿದೆ.

ಕಳೆದ ತಿಂಗಳಷ್ಟೇ ಸಚಿನ್ ಸಿನೆಮಾದ ಟ್ರೈಲರ್ ಬಡಿಯಾಗಿತ್ತು. ಅದಕ್ಕೆ ವ್ಯಾಪಕವಾಗಿ ಉತ್ತಮ ಪ್ರತಿಕ್ರಿಯೆ ಕೂಡಾ ವ್ಯಕ್ತವಾಗಿತ್ತು.

Follow Us:
Download App:
  • android
  • ios