ಬಹುತೇಕ 80-90% ಮಲ್ಟಿಪ್ಲೆಕ್ಸ್'ಗಳಲ್ಲಿ ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವ ಸಚಿನ್ ಚಿತ್ರ ಮೊದಲ ದಿನವೇ ಸುಮಾರು 9 ಕೋಟಿ ರುಪಾಯಿ ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಬೆಂಗಳೂರು(ಮೇ.27): ಸಚಿನ್ ತೆಂಡೂಲ್ಕರ್ ಜೀವನಾಧಾರಿತ ಚಿತ್ರ 'ಸಚಿನ್ ಎ ಬಿಲಿಯನ್ ಡ್ರೀಮ್ಸ್' ಚಿತ್ರ ದೇಶದಾದ್ಯಂತ ತೆರೆಕಂಡಿದ್ದು, ಮೊದಲ ದಿನವೇ ಗಲ್ಲಾ ಪೆಟ್ಟಿಗೆ ದೋಚುವಲ್ಲಿ ಯಶಸ್ವಿಯಾಗಿದೆ.
ಬಹುತೇಕ 80-90% ಮಲ್ಟಿಪ್ಲೆಕ್ಸ್'ಗಳಲ್ಲಿ ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವ ಸಚಿನ್ ಚಿತ್ರ ಮೊದಲ ದಿನವೇ ಸುಮಾರು 9 ಕೋಟಿ ರುಪಾಯಿ ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಇಂಗ್ಲೀಷ್, ಹಿಂದಿ, ಮರಾಠಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ದೇಶದಾದ್ಯಂತ 400 ಪರದೆಗಳಲ್ಲಿ ತೆರೆಕಂಡಿರುವ 'ಸಚಿನ್ ಎ ಬಿಲಿಯನ್ ಡ್ರೀಮ್ಸ್', ಇಂದು ಮತ್ತು ನಾಳೆ ವಾರಾಂತ್ಯದ ದಿನಗಳಾಗಿರುವುದರಿಂದ ಇನ್ನಷ್ಟು ಪ್ರೇಕ್ಷಕರು ಸಿನಿಮಾ ಮಂದಿರದತ್ತ ಮುಗಿಬೀಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಆದರೆ ಸಚಿನ್ ಚಿತ್ರವು ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್ ಧೋನಿ ಜೀವನಾಧಾರಿತ ಚಿತ್ರ ಎಂ.ಎಸ್ ಧೋನಿ ಅನ್'ಟೋಲ್ಡ್ ಸ್ಟೋರಿಯ ಗಳಿಕೆಯ ಮೊತ್ತವನ್ನು ಹಿಂದಿಕ್ಕುವಲ್ಲಿ ವಿಫಲವಾಗಿದೆ. ಮಾಹಿ ಚಿತ್ರ ಮೊದಲ ದಿನವೇ ಬರೋಬ್ಬರಿ 21.30 ಕೋಟಿ ರುಪಾಯಿ ಕಲೆಹಾಕುವಲ್ಲಿ ಯಶಸ್ವಿಯಾಗಿತ್ತು.