ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿತು. ಸ್ಫೋಟಕ ಆರಂಭ ನೀಡಿದ ನರೈನ್-ಲಿನ್ ಜೋಡಿ ಮೊದಲ ವಿಕೆಟ್’ಗೆ 34 ರನ್’ಗಳ ಜತೆಯಾಟ ನಿಭಾಯಿಸಿತು. ಇದರ ಬೆನ್ನಲ್ಲೇ ಕೇವಲ 2 ರನ್’ಗಳ ಅಂತರದಲ್ಲಿ ನರೈನ್ ಹಾಗೂ ಲಿನ್ ಪೆವಿಲಿಯನ್ ಸೇರಿದರು.

ಕೋಲ್ಕತಾ[ಮಾ.27]: ರಾಬಿನ್ ಉತ್ತಪ್ಪ, ನಿತಿಶ್ ರಾಣಾ ಆಕರ್ಷಕ ಅರ್ಧಶತಕಗಳ ಹಾಗೂ ಆ್ಯಂಡ್ರೆ ರಸೆಲ್ ಸಿಡಿಲಬ್ಬರದ ಬ್ಯಾಟಿಂಗ್[48] ನೆರವಿನಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡ 218 ರನ್ ಬಾರಿಸಿದ್ದು, ಪ್ರವಾಸಿ ಪಂಜಾಬ್ ತಂಡಕ್ಕೆ ಸವಾಲಿನ ಗುರಿ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿತು. ಸ್ಫೋಟಕ ಆರಂಭ ನೀಡಿದ ನರೈನ್-ಲಿನ್ ಜೋಡಿ ಮೊದಲ ವಿಕೆಟ್’ಗೆ 34 ರನ್’ಗಳ ಜತೆಯಾಟ ನಿಭಾಯಿಸಿತು. ಇದರ ಬೆನ್ನಲ್ಲೇ ಕೇವಲ 2 ರನ್’ಗಳ ಅಂತರದಲ್ಲಿ ನರೈನ್ ಹಾಗೂ ಲಿನ್ ಪೆವಿಲಿಯನ್ ಸೇರಿದರು.

ಆಸರೆಯಾದ ರಾಣಾ-ಉತ್ತಪ್ಪ: ಕೇವಲ 36 ರನ್’ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಕೆಕೆಆರ್’ಗೆ ನಿತಿಶ್ ರಾಣಾ ಹಾಗೂ ರಾಬಿನ್ ಉತ್ತಪ್ಪ ಆಸರೆಯಾದರು. ಎಚ್ಚರಿಕೆ ಆಟ ಪ್ರದರ್ಶಿಸಿದ ಈ ಜೋಡಿ ಮೂರನೇ ವಿಕೆಟ್’ಗೆ 110 ರನ್’ಗಳ ಜತೆಯಾಟವಾಡುವ ಮೂಲಕ ಬೃಹತ್ ಮೊತ್ತ ಕಲೆ ಹಾಕಲು ನೆರವಾದರು. ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ರಾಣಾ ಸತತ ಎರಡನೇ ಬಾರಿಗೆ ಅರ್ಧಶತಕ ಪೂರೈಸಿದರು. ಕೇವಲ 34 ಎಸೆತಗಳಲ್ಲಿ 2 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 63 ರನ್ ಚಚ್ಚಿ ವರಣ್ ಚಕ್ರವರ್ತಿಗೆ ಚೊಚ್ಚಲ ಬಲಿಯಾದರು. ಆ ಬಳಿಕ ಉತ್ತಪ್ಪ ಕೂಡಿಕೊಂಡ ರಸೆಲ್ ಪಂಜಾಬ್ ಬೌಲರ್’ಗಳನ್ನು ಮನಬಂದಂತೆ ದಂಡಿಸಿದರು. ಉತ್ತಪ್ಪ 50 ಎಸೆತಗಳಲ್ಲಿ ಅಜೇಯ 67 ರನ್ ಬಾರಿಸಿದರೆ, ರಸೆಲ್ ಕೇವಲ 17 ಎಸೆತಗಳಲ್ಲಿ 3 ಬೌಂಡರಿ ಹಾಗೂ 5 ಸಿಕ್ಸರ್’ನೊಂದಿಗೆ 48 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಸಂಕ್ಷಿಪ್ತ ಸ್ಕೋರ್:
ಕೆಕೆಆರ್: 218/4
ರಾಬಿನ್ ಉತ್ತಪ್ಪ: 67