ಪ್ಲೇಆಫ್ ರೇಸ್'ನಿಂದ ಮುಂಬೈ ಔಟ್ : ಬಟ್ಲರ್ ಆಕರ್ಷಕ ಆಟ

First Published 13, May 2018, 11:38 PM IST
RR Won by 8 Wickets Butler Best Game
Highlights

ಮೊದಲ ವಿಕೆಟ್'ಗೆ ನೆರವು ನೀಡಿದ ನಾಯಕ ಅಜಿಂಕ್ಯಾ ರಹಾನೆ 36 ಚಂಡುಗಳಲ್ಲಿ 4ಬೌಂಡರಿಗಳೊಂದಿಗೆ 37 ರನ್ ಬಾರಿಸಿದರು.

ಮುಂಬೈ(ಮೇ.13): ಹ್ಯಾಟ್ರಿಕ್ ಗೆಲುವು ಸಾಧಿಸಿ ನಿರೀಕ್ಷೆ ಹುಟ್ಟಿಸಿದ್ದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಪ್ಲೇಆಫ್ ಕನಸು ಭಗ್ನಗೊಂಡಿದೆ. 8ವಿಕೇಟ್'ಗಳಿಂದ ಗೆಲುವು ಸಾಧಿಸಿದ ರಾಜಸ್ಥಾನ್ ರಾಯಲ್ಸ್ ಪ್ಲೇ ಆಫ್ ಕನಸನ್ನು ಉಳಿಸಿಕೊಂಡಿದೆ.
ಮುಂಬೈ ನೀಡಿದ 169 ರನ್'ಗಳ ಸವಾಲನ್ನು ಬೆನ್ನಟ್ಟಿದ ರಾಜಸ್ಥಾನ್ ತಂಡ 18 ಓವರ್'ಗಳಲ್ಲಿ ಗುರಿ ತಲುಪಿತು.   ಆಕರ್ಷಕ ಅರ್ಧ ಶತಕ ಸಿಡಿಸಿದ ಬಟ್ಲರ್ ಗೆಲುವಿನ ರುವಾರಿಯಾದರು.  53 ಎಸೆತಗಳ 94 ರನ್'ಗಳ ಅವರ ಆಟದಲ್ಲಿ 5 ಸಿಕ್ಸ್ 9 ಬೌಂಡರಿಗಳಿದ್ದವು. 
ಮೊದಲ ವಿಕೆಟ್'ಗೆ ನೆರವು ನೀಡಿದ ನಾಯಕ ಅಜಿಂಕ್ಯಾ ರಹಾನೆ 36 ಚಂಡುಗಳಲ್ಲಿ 4ಬೌಂಡರಿಗಳೊಂದಿಗೆ 37 ರನ್ ಬಾರಿಸಿದರು.
ಲೆವಿಸ್ ಅರ್ಧ ಶತಕ
ಟಾಸ್ ಗೆದ್ದ ಅಜಿಂಕ್ಯಾ ರಹಾನೆ ರೋಹಿತ್ ಶರ್ಮಾ ಪಡೆಯನ್ನು ಬ್ಯಾಟಿಂಗ್ ಆಹ್ವಾನಿಸಿದರು.  ಆರಂಭಿಕವಾಗಿ ಉತ್ತಮ ಆಟವಾಡಿದ ಸೂರ್ಯಕಾಂತ್ ಯಾದವ್ ಹಾಗೂ ಇ.ಲೆವಿಸ್ ಮೊದಲ ವಿಕೆಟ್ ಜೊತೆಯಾಟದಲ್ಲಿ 87 ರನ್ ಪೇರಿಸಿದರು. 
ಯಾದವ್ 38(31) ಅರ್ಚರ್ ಬೌಲಿಂಗ್'ನಲ್ಲಿ ಔಟಾದ ನಂತರ ಲೆವಿಸ್(60, 42 ಎಸೆತ, 4 ಸಿಕ್ಸ್, 4 ಬೌಂಡರಿ) ಅರ್ಧ ಶತಕ ಗಳಿಸಿ ಕುಲಕರ್ಣಿ ಬೌಲಿಂಗ್'ನಲ್ಲಿ  ಪೆವಿಲಿಯನ್'ಗೆ ತೆರಳಿದರು.

ಸ್ಕೋರ್ 
ಮುಂಬೈ ಇಂಡಿಯನ್ಸ್ 20 ಓವರ್'ಗಳಲ್ಲಿ --
(ಲೆವಿಸ್ 60, ಎಸ್. ಯಾದವ್ 38 )

ರಾಜಸ್ಥಾನ್ ರಾಯಲ್ಸ್  18 ಓವರ್'ಗಳಲ್ಲಿ 171
(ಬಟ್ಲರ್ , ರಹಾನೆ 37)

ಫಲಿತಾಂಶ: ರಾಜಸ್ಥಾನ್ ರಾಯಲ್ಸ್'ಗೆ 8 ವಿಕೇಟ್'ಗಳ ಜಯ

loader