Asianet Suvarna News Asianet Suvarna News

ಸೆಹ್ವಾಗ್ ಕೆಣಕಲು ರಾಸ್'ಗೆ ಹಿಂದಿ ಹೇಳಿಕೊಟ್ಟವರಾರು..? ಬಯಲಾಯ್ತು ರಾಸ್ ಟೇಲರ್ ಹಿಂದಿ ಸೀಕ್ರೇಟ್..!

ಸದ್ಯ ಟೇಲರ್​​ ತಮ್ಮ ತವರಿಗೆ ಮರಳಿದ್ದಾಗಿದೆ. ಹೋಗುವಾಗ ಭಾರತೀಯರಿಗೆ ಧನ್ಯವಾದವನ್ನು ಕೂಡಾ ಹೇಳಿದ್ದಾರೆ. ಏನೇ ಆದರೂ ಒಬ್ಬ ಅದ್ಭುತ ವಿದೇಶಿ ಕ್ರಿಕೆಟರ್​​ ಕೇವಲ ಕ್ರಿಕೆಟ್​ ಆಡಲು ಭಾರತಕ್ಕೆ ಬಂದು ನಂತರ ಇಡೀ ದೇಶದ ಹೃದಯ ಗೆದ್ದಿರೋದು ಮಾತ್ರ ನಿಜಕ್ಕೂ ಗ್ರೇಟ್.

Ross Taylor Reveals Who Taught Him Hindi To Counter Virender Sehwag

ನವದೆಹಲಿ(ನ.11): ಭಾರತ ವಿರುದ್ಧ ಏಕದಿನ ಮತ್ತು ಟಿ20 ಸರಣಿಗಳೆರಡನ್ನೂ ಸೋತ ನ್ಯೂಜಿಲೆಂಡ್, ಇದೀಗ ತವರಿಗೆ ಮರಳಿದೆ. ಆದರೆ ಟೂರ್ನಿಯುದ್ದಕ್ಕೂ ಟ್ವಿಟ್ಟರ್​​​'​ನಲ್ಲಿ ಹಿಂದಿ ಪೋಸ್ಟ್'​​ಗಳ ಮೂಲಕ ಗಮನ ಸೆಳದಿದ್ದ ರಾಸ್​​ ಟೇಲರ್, ತವರಿಗೆ ಮರಳುವ ಮುನ್ನ ತನಗೆ ಹಿಂದಿ ಪಾಠ ಮಾಡಿದ ಗುರುಗಳನ್ನ  ಪರಿಚಯ ಮಾಡಿಕೊಡುವುದನ್ನು ಮರೆತಿಲ್ಲ. ಅಷ್ಟಕ್ಕೂ ಟೇಲರ್​'ಗೆ ಹಿಂದಿ ಹೇಳಿಕೊಟ್ಟಿದ್ದು ಯಾರು ಗೊತ್ತಾ?

ರಾಸ್​​ ಟೇಲರ್​​ ಹಿಂದಿಗೆ ಭಾರತವೇ ಫಿದಾ:

ಹೌದು, ನ್ಯೂಜಿಲೆಂಡ್​​​ ವಿರುದ್ಧದ ಏಕದಿನ ಮತ್ತು ಟಿ20 ಸರಣಿ ಭಾರತದ ಕ್ರಿಕೆಟ್​​ ಪ್ರೇಮಿಗಳಿಗೆ ಅಷ್ಟು ಕಿಕ್​​ ಕೊಡ್ತೋ ಅದರಷ್ಟೇ ಕಿಕ್​​ ಕೊಟ್ಟಿದ್ದು ರಾಸ್​​  ಟೇಲರ್​​ ಮತ್ತು ವಿರೇಂದ್ರ ಸೆಹ್ವಾಗ್​​ ಟ್ವಿಟ್ಟರ್​​ ವಾರ್​. ಮೊದಲ ಏಕದಿನ ಪಂದ್ಯದ ವೇಳೆ ಶುರುವಾದ ಇವರಿಬ್ಬರ ಟ್ವಿಟ್ಟರ್​​ ವಾರ್​​​ ಸರಣಿ ಮುಗಿಯೋವರೆಗೂ ಮುಂದುವರೆದಿತ್ತು. ಆದರೆ ಇವರಿಬ್ಬರ ನಡುವಿನ ವಾರ್​ ಭಾರತದ ಕ್ರಿಕೆಟ್​​ ಪ್ರೇಮಿಗಳಿಗೆ ಸಖತ್​​​ ಮನರಂಜನೆ ನೀಡಿದ್ದಂತೂ ಸುಳ್ಳಲ್ಲ.​​

ಸೆಹ್ವಾಗ್​ ಮತ್ತು ರಾಸ್​​ ಟೇಲರ್​​ ನಡುವಿನ ಟ್ವಿಟ್ಟರ್​​ ವಾರ್​​ ಶುರುವಾಗಿದ್ದು ಮೊದಲ ಏಕದಿನ ಪಂದ್ಯದಲ್ಲಿ. ಟೇಲರ್​​ ಮೊದಲ ಪಂದ್ಯದಲ್ಲಿ 95 ರನ್​ಗಳಿಸಿ ನ್ಯೂಜಿಲೆಂಡ್ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಅಂದು ಟೇಲರ್'​​​ರನ್ನ ದರ್ಜಿ ಎಂದು ಕರೆದ ವೀರೂ, ದೀಪಾವಳಿ ಹಬ್ಬದಲ್ಲಿ ಬಟ್ಟೆ ಹೊಲಿಯೋ ಕೆಲಸ ಜಾಸ್ತಿ ಇದ್ರೂ ಅದ್ಭುತ ಪ್ರದರ್ಶನ ತೋರಿದ್ದೀರಿ ಎಂದು ಟ್ವಿಟ್​​ ಮಾಡಿದ್ದರು. ಇದಕ್ಕೆ ಟೇಲರ್​​ ಹಿಂದಿಯಲ್ಲೇ ರಿಪ್ಲೈ ಮಾಡಿ ಎಲ್ಲರನ್ನೂ ದಂಗು ಬಡಿಸಿದ್ರು. ಸೆಹ್ವಾಗ್'​ಗೆ ಟಾಂಗ್​ ಕೊಡುವಂತೆ 'ಮುಂದಿನ ಬಾರಿ ಬೇಗ ನಿಮ್ಮ ಆರ್ಡರ್​'ಗಳನ್ನ ನೀಡಿ ಟೈಂಗೆ ಸರಿಯಾಗಿ ಡಿಲಿವರಿ ಮಾಡುವೆ' ಎಂದು ಹಿಂದಿಯಲ್ಲಿ ಟ್ವಿಟ್​​ ಮಾಡಿದ್ರು.

ಟೇಲರ್​​'ನ ಈ ಟ್ವಿಟ್​'ಗೆ ಸ್ವತಃ ವೀರೂ ಬೆಚ್ಚಿಬಿದ್ದಿದ್ದರು. ಏನಾದ್ರೂ ಮಾಡಿ ಟೇಲರ್'​ಗೆ ತಿರುಗೇಟು ನೀಡಬೇಕು ಅಂತ ಯೋಚನೆ ಮಾಡಿ ಟೇಲರ್​​ ಟ್ವಿಟ್ಟರ್​​'ಗೆ ಈಗ ಕೊಟ್ಟ ಪ್ಯಾಂಟನ್ನೇ ಮುಂದಿನ ವರ್ಷ ಚಿಕ್ಕದ್ದಾಗಿ ಹೊಲೆದು ಕೊಡಿ ಎಂದು ಸೆಹ್ವಾಗ್ ರಿಪ್ಲೇ ಮಾಡಿದ್ರು.

ಇಷ್ಟಕ್ಕೆ ಸುಮ್ಮನಾಗ್ ಸೆಹ್ವಾಗ್ ಟೇಲರ್​​'ಗೆ ಆಧಾರ್​​ ಕಾರ್ಡ್​ ಕೊಡಿಸಲು ಶಿಫಾರಸು ಕೂಡಾ ಮಾಡೇ ಬಿಟ್ರು.

ಇವರಿಬ್ಬರ ಟ್ವಿಟ್ಟರ್​​​ ಕಿಕ್​ ಎಷ್ಟರ ಮಟ್ಟಿಗೆ ಹೊಯ್ತು ಅಂದರೆ 2ನೇ ಟಿ20ಯ ನಂತರ ಟೇಲರ್​​​ ಒಂದು ಮುಚಿದ್ದ ಬಟ್ಟೆ ಅಂಗಡಿಯ ಮುಂದೆ ಕೂತು ಫೋಟೋ ತೆಗೆದು ಅದನ್ನ ಟ್ವಿಟ್ಟರ್​​'ನಲ್ಲಿ ಅಪ್​ಲೋಡ್​​ ಮಾಡಿ, ಅಂಗಡಿ ಬಂದ್​​ ಮಾಡಿದ್ದೇನೆ ಈಗ ತ್ರಿವೆಂಡ್ರಮ್​'ಗೆ ಹೋಗ್ತಿದ್ದೀನಿ. ಮತ್ತೆ ಬರುವೆ ಎಂದು ಪೋಸ್ಟ್​​ ಹಾಕಿದ್ದರು. ಇದು ವೀರೂಗೆ ತುಂಬಾನೇ ಇಷ್ಟವಾಗಿಬಿಡ್ತು. ತಡಮಾಡದೆ ಟೇಲರ್​'ಗೆ ಆಧಾರ್​​ ಕಾರ್ಡ್​ ಕೊಡುವಂತೆ ಆಧಾರ್​​ ಕಂಪನಿಗೆ ಶಿಫಾರಸು ಮಾಡಿ ಪೇಚಿಗೆ ಸಿಲುಕಿದ್ದರು.

ಟೇಲರ್​​'ರ ಹಿಂದಿ ಪೋಸ್ಟ್​​​ಗಳನ್ನ ನೋಡಿದ ಪ್ರತಿಯೊಬ್ಬರೂ ಟೇಲರ್​​ಗೆ ಹಿಂದಿ ಬರುತ್ತಾ..? ಅವರು ಇಷ್ಟು ಪಕ್ವವಾಗಿ ಹೇಗೆ ನಮ್ಮ ಹಿಂದಿ ಭಾಷೆಯನ್ನ ಕಲಿತರು ಎಂಬ ಪ್ರಶ್ನೆಗಳು ಮೂಡ ತೊಡಗಿದ್ದವು. ಆದರೆ ಟೇಲರ್​​ ತಮ್ಮ ತವರಿಗೂ ಮರಳೋ ಮುನ್ನ ತಮ್ಮ ಹಿಂದಿ ಮೇಷ್ಟ್ರೂಗಳನ್ನ ತಮ್ಮ ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಅವರೇ ಕಿವೀಸ್​​ ತಂಡದಲ್ಲಿರುವ ಭಾರತೀಯ ಮೂಲದ ಇಶ್​​ ಸೋಧಿ ಮತ್ತು ಸಿಬ್ಬಂದಿ​ ಮೆಂಮ್ಬರ್​​​ ದೇವ್​.

ಹೌದು, ಸದ್ಯ ಕೀವಿಸ್​​ ತಂಡದ ಬೌಲಿಂಗ್​ ಟ್ರಂಪ್​ ಕಾರ್ಡ್​ ಇಶ್​ ಸೋಧಿ ಮತ್ತು ಸ್ಟಾಫ್​ ಮೆಂಮ್ಬರ್​​​ ದೇವ್​ ಅವರು ಟೇಲರ್​​ಗೆ ಹಿಂದಿ ಕಲಿಯಲು ನೆರವಾಗಿದ್ದರಂತೆ. ಅಷ್ಟೇ ಅಲ್ಲ ಪ್ರತೀ ಬಾರಿ ತಮ್ಮ ಟ್ವಿಟ್​​'ಗಳ ಮೂಲಕ ಕಾಲೆಯುತ್ತಿದ್ದ ವೀರೂಗೆ ಮೊದಲ ಬಾರಿಗೆ ಟೇಲರ್​​​ ಶಾಕ್​ ಕೊಡಲು ಇವರಿಬ್ಬರು ನೆರವಾಗಿದ್ದರು.

ಸದ್ಯ ಟೇಲರ್​​ ತಮ್ಮ ತವರಿಗೆ ಮರಳಿದ್ದಾಗಿದೆ. ಹೋಗುವಾಗ ಭಾರತೀಯರಿಗೆ ಧನ್ಯವಾದವನ್ನು ಕೂಡಾ ಹೇಳಿದ್ದಾರೆ. ಏನೇ ಆದರೂ ಒಬ್ಬ ಅದ್ಭುತ ವಿದೇಶಿ ಕ್ರಿಕೆಟರ್​​ ಕೇವಲ ಕ್ರಿಕೆಟ್​ ಆಡಲು ಭಾರತಕ್ಕೆ ಬಂದು ನಂತರ ಇಡೀ ದೇಶದ ಹೃದಯ ಗೆದ್ದಿರೋದು ಮಾತ್ರ ನಿಜಕ್ಕೂ ಗ್ರೇಟ್.

Follow Us:
Download App:
  • android
  • ios