ಕಾರ್ಡೆರೊಗೆ ಖ್ಯಾತಿ ಗಳಿಸುವ ಹುಚ್ಚಿದ್ದು, ಇದಕ್ಕಾಗಿಯೇ ಆಕೆ ನನ್ನೊಂದಿಗೆ ಡೇಟಿಂಗ್ ನಡೆಸಿದ್ದಳು. ಇದು ಗೊತ್ತಾಗುತ್ತಲೇ ಆಕೆಗೆ ಗುಡ್‌ಬೈ ಹೇಳಿದೆ ಎಂದು ರೊನಾಲ್ಡೊ ಹೇಳಿಕೊಂಡಿದ್ದಾರೆ.

ನವದೆಹಲಿ(ನ.01): ಮಾಜಿ ಮಿಸ್ ಸ್ಪೇನ್ ಡಿಸೈರೀ ಕಾರ್ಡೆರೊ ಜತೆ ಸೆಪ್ಟೆಂಬರ್‌ನಿಂದ ಡೇಟಿಂಗ್ ನಡೆಸುತ್ತಿದ್ದ ರಿಯಲ್ ಮ್ಯಾಡ್ರಿಡ್ ಸ್ಟಾರ್ ಫುಟ್ಬಾಲಿಗ ಕ್ರಿಶ್ಚಿಯಾನೊ ರೊನಾಲ್ಡೊ, ಇದೀಗ ಈ ಚೆಲುವೆಯನ್ನು ದೂರ ತಳ್ಳಿದ್ದಾರೆಂಬ ಸುದ್ದಿ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇನ್‌ಸ್ಟಾಗ್ರಾಂ ಮೂಲಕ ಈ ಇಬ್ಬರೂ ಜತೆಯಾಗಿದ್ದರು. ಕಾರ್ಡೆರೊಗೆ ಖ್ಯಾತಿ ಗಳಿಸುವ ಹುಚ್ಚಿದ್ದು, ಇದಕ್ಕಾಗಿಯೇ ಆಕೆ ನನ್ನೊಂದಿಗೆ ಡೇಟಿಂಗ್ ನಡೆಸಿದ್ದಳು. ಇದು ಗೊತ್ತಾಗುತ್ತಲೇ ಆಕೆಗೆ ಗುಡ್‌ಬೈ ಹೇಳಿದೆ ಎಂದು ರೊನಾಲ್ಡೊ ಹೇಳಿಕೊಂಡಿದ್ದಾರೆ.