Asianet Suvarna News Asianet Suvarna News

ಫಿಫಾ ವಿಶ್ವಕಪ್: ರೊನಾಲ್ಡೋ ಖಾತೆಗೆ ಮತ್ತೊಂದು ದಾಖಲೆ..!

ಅಂತರಾಷ್ಟ್ರೀಯ ಫುಟ್ಬಾಲ್’ನಲ್ಲಿ ಯೂರೋಪ್ ಪರ ಗರಿಷ್ಠ ಗೋಲು ಸಿಡಿಸಿದ ಆಟಗಾರ ಎನ್ನುವ ದಾಖಲೆಯನ್ನು ಕ್ರಿಸ್ಟಿಯಾನೋ ರೊನಾಲ್ಡೊ ನಿರ್ಮಿಸಿದ್ದಾರೆ.

ಅಂತರಾಷ್ಟ್ರೀಯ ಫುಟ್ಬಾಲ್’ನಲ್ಲಿ ಯೂರೋಪ್ ಪರ ಗರಿಷ್ಠ ಗೋಲು ಸಿಡಿಸಿದ ಆಟಗಾರ ಎನ್ನುವ ದಾಖಲೆಯನ್ನು ಕ್ರಿಸ್ಟಿಯಾನೋ ರೊನಾಲ್ಡೊ ನಿರ್ಮಿಸಿದ್ದಾರೆ.

ಮೊರಾಕ್ಕೋ ವಿರುದ್ಧದ ಪಂದ್ಯದಲ್ಲಿ ಫೋರ್ಚುಗಲ್’ನ ಸೂಪರ್ ಸ್ಟಾರ್ ರೊನಾಲ್ಡೋ ಅಂತರಾಷ್ಟ್ರೀಯ ಫುಟ್ಬಾಲ್’ನಲ್ಲಿ 85ನೇ ಗೋಲು ಸಿಡಿಸುವ ಮೂಲಕ ವಿನೂತನ ದಾಖಲೆ ಬರೆದಿದ್ದಾರೆ. ಈ ಮೂಲಕ ಫುಟ್ಬಾಲ್ ದಂತಕತೆ ಫೆರೇಂಕ್ ಪುಸ್ಕಾಸ್ ಹೆಸರಿನಲ್ಲಿದ್ದ ದಾಖಲೆಯನ್ನು ರೊನಾಲ್ಡೋ ಅಳಿಸಿಹಾಕಿದರು. ಸ್ಪೇನ್ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಬಾರಿಸಿದ್ದಾಗಲೇ ರೊನಾಲ್ಡೊ ಪುಸ್ಕಾಸ್ ಗೋಲುಗಳ ದಾಖಲೆಯನ್ನು ಸರಿಗಟ್ಟಿದ್ದರು. ಇದೀಗ ಮೊರಾಕ್ಕೋ ವಿರುದ್ಧ ಬಾರಿಸಿದ ಗೋಲು ರೊನಾಲ್ಡೊ ಕಿರೀಟಕ್ಕೆ ಮತ್ತೊಂದು ಗರಿ ಸಿಕ್ಕಂತಾಗಿದೆ.