ರೋಹಿತ್'ಗೆ ಆರಂಭದಲ್ಲಿ ಶಿಖರ್ ಧವನ್ ಉತ್ತಮ ಜೊತೆಯಾಟ ನೀಡಿದರು. 27 ಚಂಡುಗಳನ್ನು ಎದುರಿಸಿದ ಧವನ್ 5 ಬೌಂಡರಿ ಹಾಗೂ 1 ಸಿಕ್ಸ್'ರ್'ನೊಂದಿಗೆ 35 ಬಾರಿಸಿದರು.

ಕೊಲಂಬೊ(ಮಾ.14): ನಾಯಕ ರೋಹಿತ್ ಶರ್ಮಾ ಹಾಗೂ ಸುರೇಶ್ ರೈನಾ ಅವರ ಸ್ಫೋಟಕ ಆಟದಿಂದಾಗಿ ಭಾರತ ತಂಡ ತ್ರಿಕೋನ ಟಿ20 ಸರಣಿಯ 4ನೇ ಲೀಗ್ ಪಂದ್ಯದಲ್ಲಿ 177 ರನ್'ಗಳ ಟಾರ್ಗೆಟ್ ನೀಡಿದೆ.

Add Asianetnews Kannada as a Preferred SourcegooglePreferred

ಸರಣಿ ಪೂರ್ತಿ ವೈಫಲ್ಯ ಕಂಡಿದ್ದ ರೋಹಿತ್ ಶರ್ಮಾ ಇಂದು ಭರ್ಜರಿ ಆಟವಾಡಿದರು. 61 ಚಂಡುಗಳನ್ನು ಎದುರಿಸಿ 5 ಸಿಕ್ಸ್'ರ್ ಹಾಗೂ 5 ಬೌಂಡರಿಯೊಂದಿಗೆ 89 ರನ್ ಬಾರಿಸಿದರು. ರೋಹಿತ್'ಗೆ ಆರಂಭದಲ್ಲಿ ಶಿಖರ್ ಧವನ್ ಉತ್ತಮ ಜೊತೆಯಾಟ ನೀಡಿದರು. 27 ಚಂಡುಗಳನ್ನು ಎದುರಿಸಿದ ಧವನ್ 5 ಬೌಂಡರಿ ಹಾಗೂ 1 ಸಿಕ್ಸ್'ರ್'ನೊಂದಿಗೆ 35 ಬಾರಿಸಿದರು. ಮೊದಲ ಕ್ರಮಾಂಕದ ಆಟಗಾರ ರೈನಾ ಕೂಡ ಅಮೋಘ ಆಟವಾಡಿ 30 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸ್'ರ್'ನೊಂದಿಗೆ 47 ರನ್ ಸಿಡಿಸಿದರು. 20 ಓವರ್'ಗಳಲ್ಲಿ ಭಾರತ ತಂಡ 176/3 ರನ್ ಪೇರಿಸಿತು. ಟಾಸ್ ಗೆದ್ದ ಬಾಂಗ್ಲಾ ತಂಡವು ಟೀಂ ಇಂಡಿಯಾ ತಂಡವನ್ನು ಕಡಿಮೆ ರನ್'ಗೆ ನಿಯಂತ್ರಿಸಲು ಸಾಧ್ಯವಾಗಲಿಲ್ಲ.

ಸ್ಕೋರ್

ಭಾರತ 20 ಓವರ್'ಗಳಲ್ಲಿ 176/3

(ರೋಹಿತ್ ಶರ್ಮಾ 89, ಶಿಕರ್ ಧವನ್ 35, ಸುರೇಶ್ ರೈನಾ 47)

ಬಾಂಗ್ಲಾದೇಶದ ವಿರುದ್ಧದ ಪಂದ್ಯ

ವಿವರ ಅಪೂರ್ಣ