ವೆಲ್ಲಿಂಗ್ಟನ್[ಫೆ.06] ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡ ಮುನ್ನಡೆಸಲಿರುವ ರೋಹಿತ್‌ ಶರ್ಮಾ, 3 ಪಂದ್ಯಗಳ ಸರಣಿಯನ್ನು ಗೆದ್ದರೆ ಟಿ20 ಮಾದರಿಯಲ್ಲಿ ಅತಿಹೆಚ್ಚು ಗೆಲುವು ಸಾಧಿಸಿದ ಭಾರತೀಯ ನಾಯಕರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಲಿದ್ದಾರೆ. 

ಇಂಡೊ-ಕಿವೀಸ್ ಸರಣಿಯಲ್ಲಿ ನಿರ್ಮಾಣವಾದ ಅಪರೂಪದ ದಾಖಲೆಗಳಿವು..!

ರೋಹಿತ್‌ ನಾಯಕತ್ವದಲ್ಲಿ ಭಾರತ 12 ಪಂದ್ಯಗಳನ್ನಾಡಿದ್ದು 11ರಲ್ಲಿ ಗೆದ್ದಿದೆ. ಕೊಹ್ಲಿ 20 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು 12ರಲ್ಲಿ ಗೆಲುವು ಕಂಡಿದ್ದಾರೆ. ಈ ಸರಣಿಯಲ್ಲಿ 2 ಪಂದ್ಯ ಗೆದ್ದರೆ ಕೊಹ್ಲಿಯನ್ನು ರೋಹಿತ್‌ ಹಿಂದಿಕ್ಕಲಿದ್ದಾರೆ. 72 ಪಂದ್ಯಗಳಲ್ಲಿ 41 ಗೆಲುವು ಕಂಡಿದ್ದ ಧೋನಿ ಮೊದಲ ಸ್ಥಾನದಲ್ಲಿದ್ದಾರೆ.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಟೀಂ ಇಂಡಿಯಾ; 2 ಪ್ರಮುಖ ಬದಲಾವಣೆ

ಇನ್ನು ರೋಹಿತ್ ಶರ್ಮಾ ಇನ್ನು ಕೇವಲ 36 ರನ್ ಬಾರಿಸಿದರೆ ಮಾರ್ಟಿನ್ ಗಪ್ಟಿಲ್ ಅವರನ್ನು ಹಿಂದಿಕ್ಕಿ ಟಿ20 ಕ್ರಿಕೆಟ್’ನಲ್ಲಿ ಗರಿಷ್ಠ ರನ್ ಸಿಡಿಸಿದ ಆಟಗಾರರೆನಿಸುತ್ತಾರೆ. ಪ್ರಸ್ತುತ ಗಪ್ಟಿಲ್ 74 ಇನ್ನಿಂಗ್ಸ್’ಗಳಲ್ಲಿ 2272 ರನ್ ಬಾರಿಸಿದ್ದಾರೆ. ರೋಹಿತ್ ಶರ್ಮಾ 2237 ರನ್ ಬಾರಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಶೊಯೇಬ್ ಮಲಿಕ್ 2245 ರನ್ ಬಾರಿಸಿದ್ದಾರೆ.