ರೋಹಿತ್ ಶರ್ಮಾ 138 ಎಸತಗಳಲ್ಲಿ 18 ಆಕರ್ಷಕ ಬೌಂಡರಿ ಹಾಗೂ 2 ಭರ್ಜರಿ ಸಿಕ್ಸ್'ರ್'ಗಳೊಂದಿಗೆ 147 ರನ್ ಬಾರಿಸಿ ತನ್ನ ವೃತ್ತಿ ಜೀವನದ 14 ಶತಕ ದಾಖಲಿಸಿದರು
ಕಾನ್ಪುರ(ಅ.29): ಆರಂಭಿಕ ಆಟಗಾರ ರೋಹಿತ್ ಶರ್ಮಾ ಹಾಗೂ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಶತಕದ ನೆರವಿನಿಂದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಅತಿಥೇಯ ಭಾರತ ತಂಡ ನ್ಯೂಜಿಲೆಂಡ್ ಪಡೆಗೆ 338 ರನ್'ಗಳ ಬೃಹತ್ ಟಾರ್ಗೆಟ್ ನೀಡಿದೆ.
ಕಾನ್ಪುರದ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ನಾಯಕ ಕೇನ್ ವಿಲಿಯಮ್ಸ್'ನ್ ಭಾರತ ತಂಡವನ್ನು ಬ್ಯಾಟಿಂಗ್'ಗೆ ಆಹ್ವಾನಿಸಿದರು. 6ನೇ ಓವರ್'ನಲ್ಲಿ ಆರಂಭಿಕ ಆಟಗಾರ ಶಿಖರ್ ಧವನ್ ವಿಕೇಟ್ ಕಳೆದುಕೊಂಡರೂ ಅನಂತರ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಅವರ 230 ರನ್'ಗಳ ಜೊತೆಯಾಟದ ನೆರವಿನಿಂದ ಭಾರತ ತಂಡ ಬೃಹತ್ ಮೊತ್ತ ಗಳಿಸಲು ಸಾಧ್ಯವಾಯಿತು.
ರೋಹಿತ್ ಶರ್ಮಾ 138 ಎಸತಗಳಲ್ಲಿ 18 ಆಕರ್ಷಕ ಬೌಂಡರಿ ಹಾಗೂ 2 ಭರ್ಜರಿ ಸಿಕ್ಸ್'ರ್'ಗಳೊಂದಿಗೆ 147 ರನ್ ಬಾರಿಸಿ ತನ್ನ ವೃತ್ತಿ ಜೀವನದ 14 ಶತಕ ದಾಖಲಿಸಿದರು. ನಾಯಕ ವಿರಾಟ್ ಕೊಹ್ಲಿ ತಾನೇನು ಕಡಿಮೆಯಿಲ್ಲ ಎಂಬಂತೆ 106 ಎಸತೆಗಳಲ್ಲಿ 1 ಸಿಕ್ಸ್'ರ್ ಹಾಗೂ 9 ಅದ್ಭುತ ಬೌಂಡರಿಯೊಂದಿಗೆ 113 ರನ್ ಸಿಡಿಸಿ ಏಕದಿನ ಪಂದ್ಯಗಳಲ್ಲಿ 32ನೇ ಶತಕ ದಾಖಲಿಸಿದರು.
ಇವರಿಬ್ಬರ ವಿಕೆಟ್ ಪತನವಾದ ನಂತರ ಧೋನಿ(25), ಜಾಧವ್(18) ರನ್ ಗಳಿಸುವುದರೊಂದಿಗೆ ಭಾರತ ತಂಡ 6 ವಿಕೇಟ್ ನಷ್ಟಕ್ಕೆ 337 ರನ್ ಪೇರಿಸಿತು.
ಸ್ಕೋರ್
ಭಾರತ 50 ಓವರ್'ಗಳಲ್ಲಿ 6/337
(ಆರ್. ಶರ್ಮಾ:147, ಕೊಹ್ಲಿ: 113,ಸೌತಿ 2/66, ಮಿಲೇನ್ 64/2)
ವಿವರ ಅಪೂರ್ಣ
