ಬೀಜಿಂಗ್‌(ಅ.03): ಚೀನಾ ಓಪನ್‌ ಟೆನಿಸ್‌ ಪಂದ್ಯಾ​ವ​ಳಿಯಲ್ಲಿ ಭಾಗ​ವ​ಹಿ​ಸ​ಲಿ​ರುವ ಭಾರ​ತೀಯ ಟೆನಿ​ಸಿಗ ರೋಹನ್‌ ಬೋಪಣ್ಣ, ಪುರು​ಷರ ಡಬಲ್ಸ್‌ ವಿಭಾ​ಗದ ತಮ್ಮ ಮೊದಲ ಸುತ್ತಿನ ಪಂದ್ಯ​ದಲ್ಲಿ ವಿಶ್ವದ 4ನೇ ಶ್ರೇಯಾಂಕಿತ, ಸ್ಪೇನ್‌ನ ರಾಫೆಲ್‌ ನಡಾಲ್‌ ಜೋಡಿಯನ್ನು ಎದು​ರಿ​ಸ​ಲಿ​ದ್ದಾರೆ.

ಈ ಪಂದ್ಯ​ದಲ್ಲಿ ಬೋಪಣ್ಣ ಅವರು ತಮ್ಮ ಜತೆ​ಗಾರ, ಕೆನ​ಡಾದ ಡೇನಿ​ಯಲ್‌ ನೆಸ್ಟರ್‌ ಜತೆಗೆ ಕಣ​ಕ್ಕಿ​ಳಿ​ದರೆ, ನಡಾಲ್‌ ಅವರು ತಮ್ಮ ದೇಶ​ದ​ವರೇ ಆದ ಫಾಬ್ಲೊ ಕಾರೆಟ್ಟೊ ಜತೆಗೆ ಆಡ​ಲಿ​ದ್ದಾರೆ.

ಕಳೆದ ತಿಂಗಳು ನವ​ದೆ​ಹ​ಲಿ​ಯಲ್ಲಿ ನಡೆ​ದಿದ್ದ ಭಾರ​ತ-ಸ್ಪೇನ್‌ ನಡು​ವಿನ ಡೇವಿಸ್‌ ಕಪ್‌ ವಿಶ್ವ ಗುಂಪಿನ ಪ್ಲೇ ಆಫ್‌ ಸುತ್ತಿ​ನಲ್ಲಿ ಈ ಇಬ್ಬರೂ ಮುಖಾ​ಮುಖಿ​ಯಾ​ಗುವ ಸಂಭ​ವ​ವಿತ್ತು. ಆದರೆ, ಗಾಯದ ಸಮ​ಸ್ಯೆ​ಯಿಂದಾಗಿ ಬೋಪಣ್ಣ ಟೂರ್ನಿ​ಯಿಂದ ಹೊರ​ನ​ಡೆ​ದಿ​ದ್ದ​ರು.