ಟೈ ಬ್ರೇಕರ್’ ಹಣಾಹಣಿಯ ಶುರುವಿನಿಲ್ಲೂ ಎರಡೂ ಜೋಡಿ ಗೇಮ್ ಗೆಲ್ಲಲು ಜಿದ್ದಿಗೆ ಬಿದ್ದಂತೆ ಸೆಣಸಿದವು.
ಮ್ಯಾಡ್ರಿಡ್(ಮೇ.11): ಪುರುಷರ ಡಬಲ್ಸ್ ವಿಭಾಗದ ಭಾರತದ ಭರವಸೆಯ ಆಟಗಾರ ರೋಹನ್ ಬೋಪಣ್ಣ ಮತ್ತು ಉರುಗ್ವೆಯ ಪ್ಯಾಬ್ಲೊ ಕ್ಯುವಾಸ್ ಅವರು ಎಟಿಪಿ ಇಂಡಿಯಾನ ವೆಲ್ಸ್ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಆರಂಭಿಕ ಸುತ್ತಿನಲ್ಲೇ ಅನುಭವಿಸಿದೆ.
ಸರ್ಬಿಯಾದ ನೊವಾಕ್ ಜೊಕೊವಿಚ್ ಮತ್ತು ವಿಕ್ಟರ್ ಟ್ರೊಯಿಕಿ ಅವರು 2-6, 6-3, 10-7 ಸೆಟ್'ಗಳ ಅಂತರದಲ್ಲಿ ಭಾರತ ಮತ್ತು ಉರುಗ್ವೆಯ ಜೋಡಿಗೆ ಸೋಲುಣಿಸಿದರು. ಒಟ್ಟು 1 ಗಂಟೆ 06 ನಿಮಿಷ ನಡೆದ ಪಂದ್ಯದಲ್ಲಿ ಮೊದಲ ಸೆಟ್'ನಲ್ಲಿ ಭಾರತ ಮತ್ತು ಉರುಗ್ವೆಯ ಜೋಡಿ ಮಿಂಚಿತು. ಎರಡನೇ ಸೆಟ್'ನಲ್ಲಿ ಸರ್ಬಿಯಾದ ಆಟಗಾರರು ತಿರುಗೇಟು ನೀಡಿದರು.
ಟೈ ಬ್ರೇಕರ್’ ಹಣಾಹಣಿಯ ಶುರುವಿನಿಲ್ಲೂ ಎರಡೂ ಜೋಡಿ ಗೇಮ್ ಗೆಲ್ಲಲು ಜಿದ್ದಿಗೆ ಬಿದ್ದಂತೆ ಸೆಣಸಿದವು. ಹೀಗಾಗಿ 7-7ರಲ್ಲಿ ಸಮಬಲ ಕಂಡು ಬಂದಿತ್ತು. ಆ ಬಳಿಕ ಪುಟಿದೆದ್ದ ನೊವಾಕ್ ಮತ್ತು ವಿಕ್ಟರ್ ಸತತ ಮೂರು ಪಾಯಿಂಟ್ಸ್ ಹೆಕ್ಕಿ ಗೆಲುವು ಒಲಿಸಿಕೊಂಡರು.
