ಅತ್ಯದ್ಭುತ ರೀತಿಯಲ್ಲಿ ಪಂದ್ಯದಲ್ಲಿ ಹಿಡಿತ ಸಾಧಿಸಿ ಮೂರು ಮ್ಯಾಚ್ ಪಾಯಿಂಟ್ಸ್‌ಗಳನ್ನು ಕಲೆಹಾಕಿ ಸೂಪರ್ ಟೈಬ್ರೇಕರ್‌'ನಲ್ಲಿ 6-2, 3-6, 12-10ರಿಂದ ನಾಲ್ಕರ ಘಟ್ಟಕ್ಕೆ ಪ್ರವೇಶಿಸುವಲ್ಲಿ ಬೋಪಣ್ಣ ಜೋಡಿ ಸಫಲವಾಯಿತು.
ಚೆನ್ನೈ(ಜ.06): ರೋಚಕ ಸೆಣಸಾಟದ ಅತ್ಯಪೂರ್ವ ಪ್ರದರ್ಶನ ನೀಡಿದ ಭಾರತದ ಡಬಲ್ಸ್ ಆಟಗಾರ ರೋಹನ್ ಬೋಪಣ್ಣ ಹಾಗೂ ಅವರ ಯುವ ಜತೆಯಾಟಗಾರ ಜೀವನ್ ನೆಡುಚಳಿಯಾನ್ ವರ್ಷದ ಮೊಟ್ಟಮೊದಲ ಎಟಿಪಿ ಟೂರ್ನಿಯಾದ ಚೆನ್ನೈ ಓಪನ್ ಪಂದ್ಯಾವಳಿಯಲ್ಲಿ ಸೆಮಿಫೈನಲ್'ಗೆ ತಲುಪಿದರು.
ಗುರುವಾರ ತಡರಾತ್ರಿ ನಡೆದ ಪುರುಷರ ಡಬಲ್ಸ್ ವಿಭಾಗದ ಕ್ವಾರ್ಟರ್'ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಜೇಮ್ಸ್ ಸೆರೆಟಾನಿ ಮತ್ತು ಅಮೆರಿಕದ ಫಿಲಿಪ್ ಓಸ್ವಾಲ್ಡ್ ಒಡ್ಡಿದ ಕಠಿಣ ಪ್ರತಿರೋಧದಿಂದ ತುಸು ಒತ್ತಡಕ್ಕೆ ಗುರಿಯಾದರೂ, ಆನಂತರ ಅತ್ಯದ್ಭುತ ರೀತಿಯಲ್ಲಿ ಪಂದ್ಯದಲ್ಲಿ ಹಿಡಿತ ಸಾಧಿಸಿ ಮೂರು ಮ್ಯಾಚ್ ಪಾಯಿಂಟ್ಸ್ಗಳನ್ನು ಕಲೆಹಾಕಿ ಸೂಪರ್ ಟೈಬ್ರೇಕರ್'ನಲ್ಲಿ 6-2, 3-6, 12-10ರಿಂದ ನಾಲ್ಕರ ಘಟ್ಟಕ್ಕೆ ಪ್ರವೇಶಿಸುವಲ್ಲಿ ಬೋಪಣ್ಣ ಜೋಡಿ ಸಫಲವಾಯಿತು.
ಯೂಕಿ ಭಾಂಬ್ರಿ ಎರಡನೇ ಸುತ್ತಿನಲ್ಲೇ ಮುಗ್ಗರಿಸಿದ್ದರಿಂದ ಸಿಂಗಲ್ಸ್ನಲ್ಲಿ ಭಾರತದ ಸವಾಲು ಅಂತ್ಯಕಂಡಿದ್ದು, ಡಬಲ್ಸ್ನಲ್ಲಿ ಭಾರತ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.
