ಮಹಿಳಾ ಡಬಲ್ಸ್ ಸೆಮೀಸ್‌'ನಲ್ಲಿ ಸಾನಿಯಾ ಹಾಗೂ ಚೀನಾದ ಶುವಾಯಿ ಪೆಂಗ್ ಜೋಡಿ ಸು-ವೀ ಹಾಗೂ ಮೊನಿಕಾ ನಿಕುಲೆಸ್ಕು ವಿರುದ್ಧ 4-6,6-7 ಸೆಟ್‌'ಗಳಿಂದ ಸೋಲುಂಡರು.

ಸಿನ್ಸಿನಾಟಿ(ಆ.20): ಅಮೆರಿಕದಲ್ಲಿ ನಡೆಯುತ್ತಿರುವ ಸಿನ್ಸಿನಾಟಿ ಮಾಸ್ಟರ್ಸ್‌ ಟೆನಿಸ್ ಪಂದ್ಯಾವಳಿಯಿಂದ ಭಾರತದ ಸ್ಟಾರ್ ಟೆನಿಸ್ ಪಟುಗಳಾದ ಸಾನಿಯಾ ಮಿರ್ಜಾ ಹಾಗೂ ರೋಹನ್ ಬೋಪಣ್ಣ ಹೊರಬಿದ್ದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಹಿಳಾ ಡಬಲ್ಸ್ ಸೆಮೀಸ್‌'ನಲ್ಲಿ ಸಾನಿಯಾ ಹಾಗೂ ಚೀನಾದ ಶುವಾಯಿ ಪೆಂಗ್ ಜೋಡಿ ಸು-ವೀ ಹಾಗೂ ಮೊನಿಕಾ ನಿಕುಲೆಸ್ಕು ವಿರುದ್ಧ 4-6,6-7 ಸೆಟ್‌'ಗಳಿಂದ ಸೋಲುಂಡರು.

ಇನ್ನು ಪುರುಷರ ಡಬಲ್ಸ್ ಕ್ವಾರ್ಟರ್ ಫೈನಲ್‌'ನಲ್ಲಿ ಬೋಪಣ್ಣ ಹಾಗೂ ಇವಾನ್ ಡಾಡಿಗ್, ಲುಕಾಸ್ ಕುಬೊಟ್ ಹಾಗೂ ಮಾರ್ಸೆಲೊ ಮೆಲೊ ವಿರುದ್ಧ 1-6, 7-6, 7-10 ಸೆಟ್‌'ಗಳಿಂದ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದರು.