ದಾಖಲೆ ನಿರ್ಮಿಸಿದ ರೋಜರ್ ಫೆಡರರ್ ಕಣ್ಣಂಚಿನಲ್ಲಿ ನೀರು: ನಿವೃತ್ತಿ ಸೂಚನೆಯೇ ?

First Published 28, Jan 2018, 6:28 PM IST
Roger Federer Wins the Australian Open for His 20th Grand Slam Title
Highlights

ಟ್ರೋಫಿ ಸ್ವೀಕರಿಸಿದ ನಂತರ ಮಾತನಾಡಿದ ಅವವರಿಗೆ ಕಣ್ಣಿನಂಚಿನಲ್ಲಿ ನೀರು ಬಂದಿತು

ಮೆಲ್ಬೋರ್ನ್(ಜ.28)​: ಸ್ವಿಟ್ಜರ್'ಲ್ಯಾಂಡಿನ  ರೋಜರ್​​​​​​ ಫೆಡರರ್​​ ಆಸ್ಟ್ರೇಲಿಯನ್ ಓಪನ್ ಟೆನಿಸ್ ಚಾಂಪಿಯನ್​  ಆಗುವ ಮೂಲಕ ಒಟ್ಟು 20 ಬಾರಿ ಗ್ರಾಂಡ್​ ಸ್ಲ್ಯಾಮ್​​ ಗೆದ್ದು ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.

ಫೆಡರರ್​​ಗೆ ಇದು 6ನೇ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್​​​​ ಪಟ್ಟ.  ಮಾರಿನ್ ಸಿಲಿಕ್ ವಿರುದ್ಧ ರೋಜರ್ ಫೆಡರರ್​  6-2, 6-7, 6-3, 3-6, 6-1 ಸೆಟ್​​ಗಳಲ್ಲಿ ಗೆಲುವು ಸಾಧಿಸಿದ್ದಾರೆ.

ಟ್ರೋಫಿ ಸ್ವೀಕರಿಸಿದ ನಂತರ ಮಾತನಾಡಿದ ಅವವರಿಗೆ ಕಣ್ಣಿನಂಚಿನಲ್ಲಿ ನೀರು ಬಂದಿತು. ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿ 'ನೀವು ಕ್ರೀಡಾಂಗಣದ ಪೂರ್ತಿ ತುಂಬಿರುವುದಕ್ಕೆ ನನಗೆ ಗಾಭರಿಯುಂಟಾಯಿತು. ಅಭ್ಯಾಸವನ್ನು ಕೂಡ ನಾನು ಹೊರಗೆ ಮಾಡಬೇಕಾಯಿತು. ನೀವು ನನ್ನ ಮೇಲಿಟ್ಟಿರುವ ಅಭಿಮಾನಕ್ಕೆ ಧನ್ಯವಾದಗಳು. ನನ್ನ ಎದುರಾಳಿ ಮಾರಿನ್ ತಂಡ ಕೂಡ ಉತ್ತಮವಾಗಿ ಆಡಿದರು. ಅವರಿಗೂ ಒಳ್ಳೆಯದಾಗಲಿ. ಯಾವುದೇ ತಂಡವನ್ನು ನಾನು ಪ್ರೀತಿಸುತ್ತೇನೆ', ಸ್ನೇಹಪೂರ್ವಕವಾಗಿ ಸ್ವೀಕರಿಸುತ್ತೇನೆ' ಎಂದು ಹೇಳಿದರು.

36 ವರ್ಷದ ರೋಜರ್ ಇಂದು ಭಾವುಕರಾಗಿ ಆಡಿರುವ ಮಾತುಗಳು ನಿವೃತ್ತಿಯ ಸೂಚನೆಯೇ ಎಂದು ಸಮಾಜಿಕ ಮಾಧ್ಯಮಗಳಲ್ಲಿ ಅಭಿಮಾನಿಗಳು ಚರ್ಚೆ ಶುರು ಮಾಡಿದ್ದಾರೆ.

loader