Asianet Suvarna News Asianet Suvarna News

ಮತ್ತೊಮ್ಮೆ ವಿಂಬಲ್ಡನ್ ಅಧಿಪತಿಯಾಗಿ ರೋಜರ್ ಫೆಡರರ್..!

ಸೆಂಟರ್ ಕೋರ್ಟ್'ನಲ್ಲಿ ನಡೆದ ಪಂದ್ಯದಲ್ಲಿ ಮೂರನೇ ಶ್ರೇಯಾಂಕಿತ ಫೆಡರರ್ ಕ್ರೋವೇಶಿಯಾದ ಮರಿನ್ ಸಿಲಿಕ್ ಎದುರು 6-3, 6-1, 6-4 ನೇರ ಸೆಟ್'ಗಳಲ್ಲಿ ಜಯಭೇರಿ ಬಾರಿಸುವ ಮೂಲಕ ದಾಖಲೆಯ 19ನೇ ಗ್ರ್ಯಾನ್'ಸ್ಲಾಂ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

Roger Federer wins record eighth Wimbledon title against Marin Cilic

ಲಂಡನ್(ಜು.16): ಸ್ವಿಸ್ ಟೆನಿಸ್ ದಿಗ್ಗಜ ರೋಜರ್ ಫೆಡರರ್ ವಿಂಬಲ್ಡನ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ದಾಖಲೆಯ 8ನೇ ವಿಂಬಲ್ಡನ್ ಪ್ರಶಸ್ತಿ ಎತ್ತಿಹಿಡಿಯುವಲ್ಲಿ ಫೆಡರರ್ ಯಶಸ್ವಿಯಾಗಿದ್ದಾರೆ.

ಇಲ್ಲಿನ ಸೆಂಟರ್ ಕೋರ್ಟ್'ನಲ್ಲಿ ನಡೆದ ಪಂದ್ಯದಲ್ಲಿ ಮೂರನೇ ಶ್ರೇಯಾಂಕಿತ ಫೆಡರರ್ ಕ್ರೋವೇಶಿಯಾದ ಮರಿನ್ ಸಿಲಿಕ್ ಎದುರು 6-3, 6-1, 6-4 ನೇರ ಸೆಟ್'ಗಳಲ್ಲಿ ಜಯಭೇರಿ ಬಾರಿಸುವ ಮೂಲಕ ದಾಖಲೆಯ 19ನೇ ಗ್ರ್ಯಾನ್'ಸ್ಲಾಂ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

15 ಸಾವಿರ ಪ್ರೇಕ್ಷಕರಿದ್ದ ಕೋರ್ಟ್'ನಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದ ಫೆಡರರ್, ವಿಂಬಲ್ಡನ್ ಟೂರ್ನಿಯಲ್ಲಿ ಅತಿಹೆಚ್ಚು(8 ಬಾರಿ) ಪ್ರಶಸ್ತಿ ಗೆದ್ದ ಆಟಗಾರ ಎಂಬ ದಾಖಲೆಗೂ ಸಿಟ್ಜರ್'ಲ್ಯಾಂಡ್ ಆಟಗಾರ ಪಾತ್ರರಾದರು. ಈ ಮೊದಲು ವಿಲಿಯಮ್ ರೆನ್'ಶೋ ಮತ್ತು ಪ್ಯಾಟ್ ಸ್ಯಾಂಪ್ರಸ್ ತಲಾ 7 ಬಾರಿ ವಿಂಬಲ್ಡನ್ ಪ್ರಶಸ್ತಿ ಗೆದ್ದಿದ್ದರು.

Follow Us:
Download App:
  • android
  • ios