ಬ್ರಿಟನ್‌ ಆಟಗಾರ ಆ್ಯಂಡಿ ಮರ್ರೆ ಹಾಗೂ ಸರ್ಬಿಯಾ ಆಟಗಾರ ನೊವಾಕ್‌ ಜೊಕೊವಿಚ್‌ ಮೊದಲೆರಡು ಸ್ಥಾನ ಪಡೆದಿದ್ದಾರೆ.

ಪ್ಯಾರಿಸ್‌(ಏ.05): ಕೆಲದಿನಗಳ ಹಿಂದಷ್ಟೇ ಮಿಯಾಮಿ ಓಪನ್‌ ಟ್ರೋಫಿ ಜಯಿಸಿದ ಸ್ವಿಸ್‌ ಟೆನಿಸಿಗ ರೋಜರ್‌ ಫೆಡರರ್‌ ಎಟಿಪಿ ಪುರುಷರ ವಿಭಾಗದ ಟೆನಿಸ್‌ ಶ್ರೇಯಾಂಕದಲ್ಲಿ 4ನೇ ಸ್ಥಾನಕ್ಕೆ ಜಿಗಿದಿದ್ದಾರೆ.

ಮಿಯಾಮಿ ಓಪನ್‌'ಗೂ ಮುನ್ನ ಫೆಡರರ್‌ 6ನೇ ಸ್ಥಾನದಲ್ಲಿದ್ದರು. ಇನ್ನು, ಸ್ಪೇನ್‌ನ ರಾಫೆಲ್‌ ನಡಾಲ್‌ ಕೂಡ 2 ಸ್ಥಾನ ಮೇಲಕ್ಕೇರಿದ್ದು 5ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.

ಬ್ರಿಟನ್‌ ಆಟಗಾರ ಆ್ಯಂಡಿ ಮರ್ರೆ ಹಾಗೂ ಸರ್ಬಿಯಾ ಆಟಗಾರ ನೊವಾಕ್‌ ಜೊಕೊವಿಚ್‌ ಮೊದಲೆರಡು ಸ್ಥಾನ ಪಡೆದಿದ್ದಾರೆ. ಮೂರನೇ ಸ್ಥಾನದಲ್ಲಿ ಸ್ವಿಟ್ಜರ್'ಲ್ಯಾಂಡ್'ನ ಸ್ಟ್ಯಾನ್ ವಾವ್ರಿಂಕ ಭದ್ರವಾಗಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಜರ್ಮನಿಯ ಏಂಜಲಿಕ್‌ ಕೆರ್ಬರ್‌ ಮೊದಲ ಸ್ಥಾನದಲ್ಲಿದ್ದರೆ, ಸೆರೆನಾ ವಿಲಿಯಮ್ಸ್‌ ಎರಡು ಮತ್ತು ಕೆರೊಲಿನಾ ಪ್ಲಿಸ್ಕೋವಾ ತೃತೀಯ ಸ್ಥಾನದಲ್ಲಿದ್ದಾರೆ.