ಟೆನಿಸ್: ಮತ್ತೆ ನಂ.1 ಸ್ಥಾನಕ್ಕೇರಿದ ಫೆಡರರ್
ಸೋಮವಾರ ಪ್ರಕಟಗೊಳ್ಳಲಿರುವ ನೂತನ ಎಟಿಪಿ ಶ್ರೇಯಾಂಕ ಪಟ್ಟಿಯಲ್ಲಿ ಫೆಡರರ್ ಅಗ್ರಸ್ಥಾನಕ್ಕೇರಲಿದ್ದು, ವಿಂಬಲ್ಡನ್ ಗ್ರ್ಯಾಂಡ್‌ಸ್ಲಾಂ ಟೂರ್ನಿಗೆ ವಿಶ್ವ ನಂ.1 ಪಟ್ಟದೊಂದಿಗೆ ಪ್ರವೇಶಿಸುವ ಸಾಧ್ಯತೆ ಇದೆ.
ಸ್ಟುಟ್‌ಗಾರ್ಟ್[ಜೂ.17]: ಇಲ್ಲಿ ನಡೆಯುತ್ತಿರುವ ಸ್ಟುಟ್’ಗಾರ್ಟ್ ಓಪನ್ ಟೆನಿಸ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಗೆದ್ದ ಸ್ವಿಜರ್‌ಲೆಂಡ್‌ನ ರೋಜರ್ ಫೆಡರರ್, ವಿಶ್ವ ಟೆನಿಸ್ ಶ್ರೇಯಾಂಕನಲ್ಲಿ ನಂ.1 ಪಟ್ಟಕ್ಕೇರಿದ್ದರೆ. ಇದರಿಂದಾಗಿ ಫ್ರೆಂಚ್ ಓಪನ್ ವಿಜೇತ ಸ್ಪೇನ್‌ನ ನಡಾಲ್ 2ನೇ ಸ್ಥಾನಕ್ಕೆ ಇಳಿದಿದ್ದಾರೆ.
ಸೋಮವಾರ ಪ್ರಕಟಗೊಳ್ಳಲಿರುವ ನೂತನ ಎಟಿಪಿ ಶ್ರೇಯಾಂಕ ಪಟ್ಟಿಯಲ್ಲಿ ಫೆಡರರ್ ಅಗ್ರಸ್ಥಾನಕ್ಕೇರಲಿದ್ದು, ವಿಂಬಲ್ಡನ್ ಗ್ರ್ಯಾಂಡ್‌ಸ್ಲಾಂ ಟೂರ್ನಿಗೆ ವಿಶ್ವ ನಂ.1 ಪಟ್ಟದೊಂದಿಗೆ ಪ್ರವೇಶಿಸುವ ಸಾಧ್ಯತೆ ಇದೆ.
ಶನಿವಾರ ರಾತ್ರಿ ನಡೆದ ಸೆಮಿಫೈನಲ್‌ನಲ್ಲಿ ಫೆಡರರ್, ಆಸ್ಟ್ರೇಲಿಯಾದ ನಿಕ್ ಕಿರಿಯೋಸ್ ವಿರುದ್ಧ 6-7, 6-2, 7-6 ಸೆಟ್‌ಗಳಿಂದ ಗೆಲುವು ಸಾಧಿಸಿ ಫೈನಲ್‌ಗೇರಿದರು. ಆರಂಭಿಕ ಸೆಟ್‌ನಲ್ಲಿ ತೀವ್ರ ಪೈಪೋಟಿ ಎದುರಿಸಿದ ಫೆಡರರ್, ಟೈಬ್ರೇಕರ್‌ನಲ್ಲಿ ಸೋಲುಂಡರು. ಆದರೆ ಅಂತಿಮ 2 ಸೆಟ್‌ಗಳಲ್ಲಿ ಕಿರಿಯೋಸ್‌ಗೆ ತಿರುಗೇಟು ನೀಡಿ ಪ್ರಶಸ್ತಿ ಹಂತಕ್ಕೆ ಕಾಲಿಟ್ಟರು. ಫೆಡರರ್ ಫೈನಲ್‌ನಲ್ಲಿ ಕೆನಡಾದ ಮಿಲೋಸ್ ರೋನಿಕ್ ವಿರುದ್ಧ ಪ್ರಶಸ್ತಿಗಾಗಿ ಸೆಣಸಲಿದ್ದಾರೆ.