ಹಾಲೆಂಡ್ ಮೂಲದ ಓಲ್ಟ್‌ಮನ್ಸ್ ಅವರೊಂದಿಗಿನ ಒಪ್ಪಂದವು 2017ಕ್ಕೆ ಕೊನೆಯಾಗಲಿದೆ. ಆದರೆ, ಅವರ ಮಾರ್ಗದರ್ಶನದಲ್ಲಿ ತಂಡ ಮಹತ್ವದ ಪ್ರದರ್ಶನ ನೀಡುತ್ತಾ ಸಾಗಿದ್ದು ಅವರನ್ನು 2020ರ ಟೋಕಿಯೊ ಒಲಿಂಪಿಕ್ಸ್ ಕೂಟದವರೆಗೂ ತಂಡದ ಕೋಚ್ ಆಗಿ ಮುಂದುವರೆಸಲು ನಿರ್ಧರಿಸಲಾಗಿದೆ.- ನರೀಂದರ್ ಬಾತ್ರಾ

ನವದೆಹಲಿ(ನ.01): ಎರಡನೇ ಬಾರಿಗೆ ಏಷ್ಯಾ ಚಾಂಪಿಯನ್ಸ್ ಟ್ರೋಫಿ ಪಡೆದ ಬೆನ್ನಿಗೇ ರಾಷ್ಟ್ರೀಯ ಹಾಕಿ ಕೋಚ್ ರೋಲಂಟ್ ಓಲ್ಟ್‌ಮನ್ಸ್ ಅವರ ಒಪ್ಪಂದವನ್ನು 2020ರ ಒಲಿಂಪಿಕ್‌ವರೆಗೂ ಹಾಕಿ ಇಂಡಿಯಾ ವಿಸ್ತರಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘‘ಹಾಲೆಂಡ್ ಮೂಲದ ಓಲ್ಟ್‌ಮನ್ಸ್ ಅವರೊಂದಿಗಿನ ಒಪ್ಪಂದವು 2017ಕ್ಕೆ ಕೊನೆಯಾಗಲಿದೆ. ಆದರೆ, ಅವರ ಮಾರ್ಗದರ್ಶನದಲ್ಲಿ ತಂಡ ಮಹತ್ವದ ಪ್ರದರ್ಶನ ನೀಡುತ್ತಾ ಸಾಗಿದ್ದು ಅವರನ್ನು 2020ರ ಟೋಕಿಯೊ ಒಲಿಂಪಿಕ್ಸ್ ಕೂಟದವರೆಗೂ ತಂಡದ ಕೋಚ್ ಆಗಿ ಮುಂದುವರೆಸಲು ನಿರ್ಧರಿಸಲಾಗಿದೆ. ಇದಕ್ಕೆ ಓಲ್ಟ್‌ಮನ್ಸ್ ಕೂಡ ಒಪ್ಪಿಗೆ ನೀಡಿದ್ದು, ಇದನ್ನು ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್)ಕ್ಕೆ ತಿಳಿಸಲಾಗಿದೆ’’ ಎಂದು ಹಾಕಿ ಇಂಡಿಯಾ ಕಾರ್ಯದರ್ಶಿ ನರೀಂದರ್ ಬಾತ್ರಾ ಹೇಳಿದ್ದಾರೆ.

ಅಂದಹಾಗೆ ಓಲ್ಟ್‌ಮನ್ಸ್ ಮಾರ್ಗದರ್ಶನದಲ್ಲಿ ಭಾರತ ತಂಡ 2015ರ ವರ್ಲ್ಡ್ ಲೀಗ್ ಸೆಮಿಫೈನಲ್‌ನಲ್ಲಿ ಕಂಚು ಗೆದ್ದರೆ, ಜೂನ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಬೆಳ್ಳಿ ಪದಕ ಜಯಿಸಿದೆ.