ಪತ್ನಿಯೋ- ಮ್ಯಾನೇಜರೋ? ರೋಹಿತ್ ಶರ್ಮಾಗೆ ಶುರುವಾಯ್ತು ಗೊಂದಲ!

https://static.asianetnews.com/images/authors/2c1b126a-9adf-5f82-ae4f-e781463685fe.jpg
First Published 30, Jul 2018, 3:08 PM IST
Ritika Sajdeh bamboozles husband Rohit Sharma with epic comment on his latest Instagram post
Highlights

ಟೀಂ ಇಂಡಿಯಾ ಕ್ರಿಕೆಟಿಗ ರೋಹಿತ್ ಶರ್ಮಾ ತಮ್ಮ ಪತ್ನಿಯ ಕಾಲಳೆದಿದ್ದಾರೆ. ರೋಹಿತ್ ಶರ್ಮಾ ಪೋಸ್ಟ್‌ಗೆ ಎಂ ಎಸ್ ಧೋನಿ ಪತ್ನಿ ಸಾಕ್ಷಿ ಧೋನಿ, ಆಲ್ರೌಂಡರ್ ಯುವರಾಜ್ ಸಿಂಗ್ ಸೇರಿದಂತೆ ಹಲವು ಕ್ರಿಕೆಟಿಗರು ಪ್ರತಿಕ್ರಿಯಿಸಿದ್ದಾರೆ. ಅಷ್ಟಕ್ಕೂ ರೋಹಿತ್ ಮಾಡಿರೋ ಪೋಸ್ಟ್ ಎನು? ಇಲ್ಲಿದೆ ವಿವರ.

ಮುಂಬೈ(ಜು.30): ಟೀಂ ಇಂಡಿಯಾ ಕ್ರಿಕೆಟಿಗ ರೋಹಿತ್ ಶರ್ಮಾ ಹಾಗೂ ಪತ್ನಿ ರಿತಿಕಾ ಸಾಜ್ದೆ ರೋಮ್ಯಾಂಟಿಕ್ ಜೋಡಿ ಎಂದೇ ಗುರುತಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಜೋಡಿ ಹಾಕಿರೋ ಹಲವು ಫೋಟೋಗಳನ್ನ ರೋಮ್ಯಾಂಟಿಕ್ ಜೋಡಿ ಹೆಸರನ್ನ ಖಚಿತಪಡಿಸಿತ್ತು. ಆದರೆ ಇದೇ ಮೊದಲ ಬಾರಿಗೆ ರೋಹಿತ್ ಶರ್ಮಾಗೆ ಗೊಂದಲ ಶುರುವಾಗಿದೆ.

ಇಂಗ್ಲೆಂಡ್ ಪ್ರವಾಸ ಮುಗಿಸಿ ತವರಿಗೆ ವಾಪಾಸ್ಸಾದ ರೋಹಿತ್ ಶರ್ಮಾ ರಿಲ್ಯಾಕ್ಸ್ ಮೂಡ್‌ಗೆ ಜಾರಿದ್ದಾರೆ. ಆದರೆ ಈ ವೇಳೆ ಪತ್ನಿ ರಿತಿಕಾ ಸಾಜ್ದೆ ತಮ್ಮ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೇ ವೇಳೆ ಫೋಟೋ ಕ್ಲಿಕ್ಕಿಸಿರುವ ರೋಹಿತ್ ಇನ್‌ಸ್ಟ್ರಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

 

 

The downside of being married to your manager 🙄

A post shared by Rohit Sharma (@rohitsharma45) on Jul 28, 2018 at 7:23am PDT

 

ಮ್ಯಾನೇಜರ್‌ನ್ನ ಮದುವೆಯಾದರೆ ಸಮಸ್ಯೆ ಎಂದು ಬರೆದಿರುವ ರೋಹಿತ್ ಶರ್ಮಾ, ರಿತಿಕಾ ಫೋಟೋ ಪೋಸ್ಟ್ ಮಾಡಿ ಪತ್ನಿಯ ಕಾಲೆಳೆದಿದ್ದಾರೆ. ಇದಕ್ಕೆ ಮಾಜಿ ನಾಯಕ ಎಂ ಎಸ್ ಧೋನಿ ಪತ್ನಿ ಸಾಕ್ಷಿ ಧೋನಿ, ಯುವರಾಜ್ ಸಿಂಗ್ ಸೇರಿದಂತೆ ಹಲವು ಕ್ರಿಕೆಟಿಗರು ಪ್ರತಿಕ್ರಿಯಿಸಿದ್ದಾರೆ. ರೋಹಿತ್ ಪೋಸ್ಟ್‌ಗೆ ಪತ್ನಿ ರಿತಿಕಾ ಗರಂ ಆಗಿದ್ದಾರೆ.

ರೋಹಿತ್ ಶರ್ಮಾ ಪತ್ನಿ ರಿತಿಕ ಸಾಜ್ದೆ ಕ್ರಿಕೆಟ್ ಮ್ಯಾನೇಜ್ಮೆಂಟ್ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮದುವೆಗೂ ಮುನ್ನ ರೋಹಿತ್ ಶರ್ಮಾ ಅವರ ಸ್ಪೋರ್ಟ್ ಇವೆಂಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.  ಆರಂಭದಲ್ಲಿ ಇವರ ಪರಿಚಯ ಸ್ನೇಹಕ್ಕೆ ತಿರುಗಿ, 2015ರಲ್ಲಿ ಮದುವೆಯಾದರು. 
 

loader