ಪುಣೆ ನೀಡಿದ್ದ 160 ರನ್‌ಗಳ ಗುರಿಯನ್ನು ಸುಲಭವಾಗಿಯೇ ಬೆನ್ನಿಟ್ಟಿದ್ದ ಮುಂಬೈ ಇನ್ನೇನು ಗೆದ್ದೇ ಬಿಟ್ಟಿತು ಎನ್ನುವ ಹಂತದಲ್ಲಿ ಸೋಲೊಪ್ಪಿಕೊಂಡಿತು. ಕಡೆಯ ಓವರ್‌ನಲ್ಲಿ 17 ರನ್‌ಗಳಿಸಬೇಕಿದ್ದ ಮುಂಬೈ 14 ರನ್‌ಗಳಿಸಲು ಮಾತ್ರ ಸಾಧ್ಯವಾಯಿತು. ಪುಣೆ ನೀಡಿದ್ದ 160 ರನ್‌ಗಳ ಸವಾಲು ಬೆನ್ನತ್ತಿದ್ದ ಮುಂಬೈಗೆ ಪಾರ್ಥೀವ್ ಪಟೇಲ್ (33 ರನ್) ಮತ್ತು ಜೋಸ್ ಬಟ್ಲರ್ (17 ರನ್) ಉತ್ತಮ ಆರಂಭ ನೀಡಿದ್ದರು. ಬಳಿಕ ಕಡಿಮೆ ಅಂತರದಲ್ಲೇ ಮುಂಬೈನ ಕೆಲ ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಉತ್ತಮ ಆಟ ಪ್ರದರ್ಶಿಸಿದ ನಾಯಕ ರೋಹಿತ್ ಶರ್ಮಾ ಅಮೋಘ 58 ರನ್ ಮೂಲಕ ತಂಡ ತಂಡದ ನೆರವಿಗೆ ಬಂದರಾದರೂ, ಕಡೆಯ ಓವರ್‌ನಲ್ಲಿ 17 ರನ್‌ಗಳಿಸುವುದು ಸಾಧ್ಯವಾಗಲಿಲ್ಲ.

ಮುಂಬೈ(ಏ.25): ಹಿಂದಿನ ಪಂದ್ಯದಲ್ಲಿ ಹೈದ್ರಾಬಾದ್ ವಿರುದ್ಧ ಕಡೆಯ ಬಾಲ್‌ನಲ್ಲಿ ರೋಚಕ ಜಯ ಸಾಸಿದ್ದ ಪುಣೆ ತಂಡ, ಸೋಮವಾರ ಇಲ್ಲಿ ನಡೆದ ಮುಂಬೈ ವಿರುದ್ಧ ಐಪಿಎಲ್ 20 ಪಂದ್ಯವನ್ನೂ ಕೇವಲ 3 ರನ್‌ಗಳಿಂದ ಗೆಲ್ಲುವ ಮೂಲಕ ಅಮೋಘ ಪ್ರದರ್ಶನ ಮುಂದುವರೆಸಿದೆ.

ಪುಣೆ ನೀಡಿದ್ದ 160 ರನ್‌ಗಳ ಗುರಿಯನ್ನು ಸುಲಭವಾಗಿಯೇ ಬೆನ್ನಿಟ್ಟಿದ್ದ ಮುಂಬೈ ಇನ್ನೇನು ಗೆದ್ದೇ ಬಿಟ್ಟಿತು ಎನ್ನುವ ಹಂತದಲ್ಲಿ ಸೋಲೊಪ್ಪಿಕೊಂಡಿತು. ಕಡೆಯ ಓವರ್‌ನಲ್ಲಿ 17 ರನ್‌ಗಳಿಸಬೇಕಿದ್ದ ಮುಂಬೈ 14 ರನ್‌ಗಳಿಸಲು ಮಾತ್ರ ಸಾಧ್ಯವಾಯಿತು. ಪುಣೆ ನೀಡಿದ್ದ 160 ರನ್‌ಗಳ ಸವಾಲು ಬೆನ್ನತ್ತಿದ್ದ ಮುಂಬೈಗೆ ಪಾರ್ಥೀವ್ ಪಟೇಲ್ (33 ರನ್) ಮತ್ತು ಜೋಸ್ ಬಟ್ಲರ್ (17 ರನ್) ಉತ್ತಮ ಆರಂಭ ನೀಡಿದ್ದರು. ಬಳಿಕ ಕಡಿಮೆ ಅಂತರದಲ್ಲೇ ಮುಂಬೈನ ಕೆಲ ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಉತ್ತಮ ಆಟ ಪ್ರದರ್ಶಿಸಿದ ನಾಯಕ ರೋಹಿತ್ ಶರ್ಮಾ ಅಮೋಘ 58 ರನ್ ಮೂಲಕ ತಂಡ ತಂಡದ ನೆರವಿಗೆ ಬಂದರಾದರೂ, ಕಡೆಯ ಓವರ್‌ನಲ್ಲಿ 17 ರನ್‌ಗಳಿಸುವುದು ಸಾಧ್ಯವಾಗಲಿಲ್ಲ.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪುಣೆ ಪರ ರಾಹುಲ್ ತ್ರಿಪಾಠಿ (45 ರನ್), ಅಜಿಂಕ್ಯ ರಹಾನೆ (38 ರನ್), ನಾಯಕ ಸ್ಟೀವ್ ಸ್ಮಿತ್ (17), ಧೋನಿ (7), ಬೆನ್ ಸ್ಟೋಕ್ಸ್ (17 ರನ್), ಮನೋಜ್ ತಿವಾರಿ 13 ಎಸೆಗಳಲ್ಲಿ 22 ರನ್ ಹೊಡೆಯುವ ಮೂಲಕ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 160 ರನ್ ತಲುಪುವಂತೆ ನೋಡಿಕೊಂಡರು.

ಸ್ಕೋರ್

ಪುಣೆ 160/6(20)

ಮುಂಬೈ 18 ಓವರ್‌ಗಳಲ್ಲಿ 157/8

ಪಂದ್ಯ ಶ್ರೇಷ್ಠ: ಬಿ.ಸ್ಟೋಕ್ಸ್