ಚೆನ್ನೈ ಓಪನ್ ಟೆನಿಸ್ ಟೂರ್ನಿ ನನ್ನ ಪಾಲಿಗೆ ಕೊನೆಯದ್ದೇನಲ್ಲ ಎಂದಿದ್ದಾರೆ ಪೇಸ್.
ಚೆನ್ನೈ(ಜ.04): ಟೆನಿಸ್ ವೃತ್ತಿ ಜೀವನದ ನಿವೃತ್ತಿಯ ವಿಷಯ ಈ ಸಂದರ್ಭದಲ್ಲಿ ಚರ್ಚಿಸಲು ಸಾಧ್ಯವಿಲ್ಲ ಎಂದು ಭಾರತದ ಟೆನಿಸಿಗ ಲಿಯಾಂಡರ್ ಪೇಸ್ ಹೇಳಿದ್ದಾರೆ.
ಚೆನ್ನೈ ಓಪನ್ ಟೆನಿಸ್ ಟೂರ್ನಿ ನನ್ನ ಪಾಲಿಗೆ ಕೊನೆಯದ್ದೇನಲ್ಲ ಎಂದಿದ್ದಾರೆ ಪೇಸ್.
ಈ ಬಾರಿಯ ಟೂರ್ನಿಯಲ್ಲಿ ಟ್ರೋಫಿ ಜಯಿಸುವ ವಿಶ್ವಾಸದಲ್ಲಿದ್ದೇನೆ. ಇದಕ್ಕಾಗಿ ಪ್ರಭಾವಿ ಆಟವಾಡುವತ್ತ ಹೆಚ್ಚಿನ ಗಮನಹರಿಸಿರುವುದಾಗಿ ಪೇಸ್ ತಿಳಿಸಿದರು.
ಸೋಮ್‌ದೇವ್ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ. ಹಾಗಂತ ನಾನು ಹೇಳಬೇಕು ಎಂದೆನಿಲ್ಲ. ಇಂದು, ನಾಳೆ ಅಥವಾ 6 ತಿಂಗಳ ಬಳಿಕ ನಿವೃತ್ತಿ ಘೋಷಿಸಬಹುದು ಎಂದರು.
ಸದ್ಯ ಟೆನಿಸ್ ಆಟವನ್ನು ನಾನು ಇಷ್ಟಪಟ್ಟು ಆಡುತ್ತಿದ್ದೇನೆ ಎಂದಷ್ಟೇ ಹೇಳಲು ಬಯಸುತ್ತೇನೆ ಎಂದರು.
