‘‘ಫುಟ್ಬಾಲ್‌ನ ಪ್ರತಿಷ್ಠಿತ ಪ್ರಶಸ್ತಿ ಬಲಾನ್‌ ಡಿಆರ್‌ ಅನ್ನು 3 ಬಾರಿ ಪಡೆದ ಹೆಗ್ಗಳಿಕೆ ನನ್ನದಾದರೆ ಈ ಬಾರಿಯೂ ಕ್ಸಾವಿ ಪ್ರಶಸ್ತಿ ಗೆಲ್ಲಲು ವಿಫಲವಾಗಿದ್ದಾರೆ. ಮೇಲಾಗಿ ಅಂತರ್ಜಾಲದಲ್ಲಿ ಅತಿಹೆಚ್ಚು ಶೋಧಿಸಲ್ಪಟ್ಟಆಟಗಾರ ನಾನು ಎಂಬುದೂ ಗಮನದಲ್ಲಿರಲಿ’’
ಪೋರ್ಚುಗಲ್ನ ಸ್ಟಾರ್ ಫುಟ್ಬಾಲ್ ಆಟಗಾರ ಕ್ರಿಶ್ಚಿಯಾನೊ ರೊನಾಲ್ಡೊ ಮತ್ತು ಬಾರ್ಸಿಲೋನಾ ಸ್ಟಾರ್ ಆಟಗಾರ ಕ್ಸೇವಿ ಹೆರ್ನಾಂಡೆಸ್ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ.
‘‘ಫುಟ್ಬಾಲ್ನ ಪ್ರತಿಷ್ಠಿತ ಪ್ರಶಸ್ತಿ ಬಲಾನ್ ಡಿಆರ್ ಅನ್ನು 3 ಬಾರಿ ಪಡೆದ ಹೆಗ್ಗಳಿಕೆ ನನ್ನದಾದರೆ ಈ ಬಾರಿಯೂ ಕ್ಸಾವಿ ಪ್ರಶಸ್ತಿ ಗೆಲ್ಲಲು ವಿಫಲವಾಗಿದ್ದಾರೆ. ಮೇಲಾಗಿ ಅಂತರ್ಜಾಲದಲ್ಲಿ ಅತಿಹೆಚ್ಚು ಶೋಧಿಸಲ್ಪಟ್ಟಆಟಗಾರ ನಾನು ಎಂಬುದೂ ಗಮನದಲ್ಲಿರಲಿ’’ ಎಂದು ಕ್ಸೇವಿಗೆ ರಿಯಲ್ ಮ್ಯಾಡ್ರಿಡ್ ಆಟಗಾರ ರೊನಾಲ್ಡೊ ತಿರುಗೇಟು ನೀಡಿದ್ದಾರೆ.
ಅಂದಹಾಗೆ ಇದಕ್ಕೂ ಮುನ್ನ ಕ್ಸೇವಿ, ಅರ್ಜೆಂಟೀನಾ ಆಟಗಾರ ಲಯೊನೆಲ್ ಮೆಸ್ಸಿ ಅವರಂತೆ ರೊನಾಲ್ಡೊ ಈ ಕಾಲಘಟ್ಟದ ಶ್ರೇಷ್ಠ ಆಟಗಾರ ಎನಿಸಿಕೊಳ್ಳದ ನತದೃಷ್ಟಎಂದು ಕಿಚಾಯಿಸಿದ್ದರು. ಇದಕ್ಕೆ ಕೆರಳಿದ ರೊನಾಲ್ಡೊ ಬಾರ್ಸಿಲೋನಾ ಆಟಗಾರನನ್ನು ತನ್ನ ಸಾಧನೆಯಿಂದಲೇ ತರಾಟೆಗೆ ತೆಗೆದುಕೊಂಡಿದ್ದಾರೆ.
