ಐಪಿಎಲ್ ಮುಗಿದಿದೆ.. ಆದರೆ ರಾತ್ರೋ ರಾತ್ರಿ ಫೇಮಸ್ ಆದ RCB  ಗರ್ಲ್ ಕತೆ ಮುಗಿದಿಲ್ಲ. ಒಂದೆ ದಿನಕ್ಕೆ ಫಾಲೋವರ್ಸ್ ಗಳು ಹುಟ್ಟಿಕೊಂಡರು. ಆದರೆ ಈಗ ಹುಡುಗಿ ದೊಡ್ಡ ಸಮಸ್ಯೆ ಎದುರಿಸಬೇಕಾಗಿ ಬಂದಿದೆ.

ಬೆಂಗಳೂರು[ಮೇ. 14] ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬಾವುಟ ಹಿಡಿದು ರಾತ್ರಿ ಬೆಳಗಾಗುವುದರೊಳಗೆ ಫೇಮಸ್ ಆಗಿರುವ ಆರ್‌ಸಿಬಿ ಫ್ಯಾನ್ ಚೆಂದದ ಹುಡುಗಿ ಕಣ್ಣೀರು ಸುರಿಸುವಂತಾಗಿದೆ. 

RCB ಪಂದ್ಯದ ವೇಳೆ ಹೃದಯ ಕದ್ದ ಸ್ಟೇಟ್ ಕ್ರಶ್, ಯಾರೀಕೆ?

ಸೋಶಿಯಲ್ ಮೀಡಿಯಾದಲ್ಲಿ ಕಾಮುಕರ ಆಟ ಆರಂಭವಾಗಿದೆ. ಅಶ್ಲೀಲ ಕಮೆಂಟ್‌ಗಳಿಂದ ದೀಪಿಕಾ ಘೋಷ್ ತೀವ್ರವಾಗಿ ನೊಂದಿದ್ದಾರೆ. ಐಪಿಎಲ್ 2019ರಲ್ಲಿ ಬೆಂಗಳೂರಿನ ಕೊನೆಯ ಪಂದ್ಯದ ವೇಳೆ ದೀಪಿಕಾ RCB ಬಾವುಟ ಹಿಡಿದು ಮಿಂಚಿದ್ದರು. ಗೂಗಲ್ ಸರ್ಚ್‌ನಲ್ಲಿ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಅವರನ್ನೇ ಹಿಂದಿಕ್ಕಿದ್ದರು.

View post on Instagram