ಇದಕ್ಕೂ ಮೊದಲು 2ನೇ ದಿನದ ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 293 ರನ್ ಗಳಿಸಿದ್ದ ಶ್ರೀಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ 346 ರನ್‌'ಗಳಿಗೆ ಸರ್ವಪತನ ಕಂಡಿತು.

ಕೊಲಂಬೊ(ಜು.16): ಸಿಕಂದರ್ ರಾಜಾರ ಅಜೇಯ 97 ರನ್‌'ಗಳ ಬ್ಯಾಟಿಂಗ್ ನೆರವಿನಿಂದ ಪ್ರವಾಸಿ ಜಿಂಬಾಬ್ವೆ, ಆತಿಥೇಯ ಶ್ರೀಲಂಕಾ ವಿರುದ್ಧದ ಏಕೈಕ ಟೆಸ್ಟ್‌ನಲ್ಲಿ ಮೇಲುಗೈ ಸಾಧಿಸಿದೆ.

ಮೂರನೇ ದಿನದ ಅಂತ್ಯಕ್ಕೆ 2ನೇ ಇನ್ನಿಂಗ್ಸ್‌'ನಲ್ಲಿ 6 ವಿಕೆಟ್ ನಷ್ಟಕ್ಕೆ 252 ರನ್‌ ಗಳಿಸಿರುವ ಪ್ರವಾಸಿ ತಂಡ 262 ರನ್‌'ಗಳ ಮುನ್ನಡೆ ಸಾಧಿಸಿದೆ.

ಒಂದು ಹಂತದಲ್ಲಿ 23 ರನ್‌'ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಜಿಂಬಾಬ್ವೆಗೆ ಆಸರೆಯಾಗಿ ನಿಂತ ಸಿಕಂದರ್ ಲಂಕಾ ಬೌಲರ್‌ಗಳಿಗೆ ದಿಟ್ಟ ಉತ್ತರ ನೀಡಿದರು. ವಿಲಿಯಮ್ಸ್ ಹಾಗೂ ಪೀಟರ್ ಮೂರ್, ರಾಜಾಗೆ ಉತ್ತಮ ಸಾಥ್ ನೀಡಿದರು. ಸದ್ಯ 57 ರನ್ ಗಳಿಸಿರು ವ್ಯಾಲ್ಲರ್, ಸಿಕಂದರ್‌'ನೊಂದಿಗೆ ನಾಲ್ಕನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಇದಕ್ಕೂ ಮೊದಲು 2ನೇ ದಿನದ ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 293 ರನ್ ಗಳಿಸಿದ್ದ ಶ್ರೀಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ 346 ರನ್‌'ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ 10 ರನ್‌'ಗಳ ಹಿನ್ನಡೆ ಅನುಭವಿಸಿತು.

ಸಂಕ್ಷಿಪ್ತ ಸ್ಕೋರ್:

ಜಿಂಬಾಬ್ವೆ: 356 ಮತ್ತು 252/7

ಸಿಕಂದರ್ 97*,

ವ್ಯಾಲ್ಲರ್ 57*,

ಹೆರಾತ್: 85/4

ಶ್ರೀಲಂಕಾ : 346

ತರಂಗ 71

ಚಾಂಡಿಮಲ್ 55

ಕ್ರೀಮರ್ 125/5