ಜಡೇಜಾ ‘‘ಡ್ರೆಸ್ಸಿಂಗ್ ಕೊಠಡಿಯಲ್ಲಿ ಎಲ್ಲರೂ ಒಂದೇ ರೀತಿ ಕಾಣುತ್ತಿದ್ದೆವು.
ನವದೆಹಲಿ(ಏ.27): ‘ಬ್ರೇಕ್ ದ ಬಿಯರ್ಡ್’ಚಾಲೆಂಜ್ ಮೂಲಕ ಸಾಮಾಜಿಕ ತಾಣಗಳಲ್ಲಿ ಸಂಚಲನ ಮೂಡಿಸಿರುವ ಭಾರತದ ಆಲ್ರೌಂಡರ್ ರವೀಂದ್ರ ಜಡೇಜಾ, ತಾವು ಗಡ್ಡ ತೆಗೆದಿದ್ದರ ಹಿಂದಿನ ರಹಸ್ಯವನ್ನು ತೆರೆದಿಟ್ಟಿದ್ದಾರೆ.
‘ದಿ ಕ್ವಿಂಟ್’ಗೆ ನೀಡಿದ ಸಂದರ್ಶನದಲ್ಲಿ ಜಡೇಜಾ ‘‘ಡ್ರೆಸ್ಸಿಂಗ್ ಕೊಠಡಿಯಲ್ಲಿ ಎಲ್ಲರೂ ಒಂದೇ ರೀತಿ ಕಾಣುತ್ತಿದ್ದೆವು. ಒಮ್ಮೆ ನಾನು ತಲೆ ಬಗ್ಗಿಸಿಕೊಂಡು ಕೂತಿದ್ದಾಗ ಕೋಚ್ ಅನಿಲ್ ಕುಂಬ್ಳೆ ನನ್ನನ್ನು ಕೆ.ಎಲ್.ರಾಹುಲ್ ಅಂದುಕೊಂಡು ನನ್ನ ಬಳಿ ಕನ್ನಡದಲ್ಲಿ ಮಾತನಾಡಲು ಆರಂಭಿಸಿದರು. ನಾನಾಗ ತಲೆಯೆತ್ತಿ ನಾನು ರಾಹುಲ್ ಅಲ್ಲ ಎಂದು ಹೇಳಿದ್ದೆ. ಆಗಲೇ ಈ ಸಮಸ್ಯೆಗೆ ಒಂದು ಪರಿಹಾರ ಹುಡುಕಬೇಕು ಎಂದುಕೊಂಡು ಗಡ್ಡ ತೆಗೆದು, ಹೊಸ ವಿನ್ಯಾಸ ಮಾಡಿದೆ’’ ಎಂದು ಹೇಳಿದ್ದಾರೆ.
