Asianet Suvarna News Asianet Suvarna News

ಶಾಸ್ತ್ರಿ ಕೋಚ್ ಆಗಿರೋದ್ರ ಹಿಂದಿದೆ ರೋಚಕ ಸ್ಟೋರಿ..!: ಸೇಡು ಮರೆತು ದೇಶಕ್ಕಾಗಿ ತಲೆಬಾಗಿದ ದಾದಾ

ರವಿಶಾಸ್ತ್ರಿ ಇನ್ನೂ ಎರಡು ವರ್ಷ ಕೊಹ್ಲಿ ಹುಡುಗರಿಗೆ ಪಾಠ ಮಾಡಲಿದ್ದಾರೆ. ಆದ್ರೆ ಶಾಸ್ತ್ರಿ ಟೀಂ ಇಂಡಿಯಾ ಕೋಚ್​​​ ಆಗಿದ್ದೇ ಇಂಟರೆಸ್ಟಿಂಗ್​​​​. ಇನ್ನೂ ಡೈರೆಕ್ಟಾಗಿ ಹೇಳಬೇಕೆಂದರೆ ಸೌರವ್​​​ ಗಂಗೂಲಿ ಮನಸ್ಸು ಮಾಡಿದಿದ್ದರೆ ಶಾಸ್ತ್ರಿ ಕೋಚ್​​​ ಆಗುತ್ತಲೇ ಇರಲಿಲ್ಲ. ಗಂಗೂಲಿಯ ದೊಡ್ಡ ಮನಸ್ಸು ಮತ್ತು ಟೀಂ ಇಂಡಿಯಾ ಮೇಲಿನ ಕಾಳಜಿ ಇಂದು ಶಾಸ್ತ್ರಿ ಕೋಚ್​​ ಆಗಿದ್ದಾರೆ.

Ravi sha

ಮುಂಬೈ(ಜು.13): ರವಿಶಾಸ್ತ್ರಿ ಇನ್ನೂ ಎರಡು ವರ್ಷ ಕೊಹ್ಲಿ ಹುಡುಗರಿಗೆ ಪಾಠ ಮಾಡಲಿದ್ದಾರೆ. ಆದ್ರೆ ಶಾಸ್ತ್ರಿ ಟೀಂ ಇಂಡಿಯಾ ಕೋಚ್​​​ ಆಗಿದ್ದೇ ಇಂಟರೆಸ್ಟಿಂಗ್​​​​. ಇನ್ನೂ ಡೈರೆಕ್ಟಾಗಿ ಹೇಳಬೇಕೆಂದರೆ ಸೌರವ್​​​ ಗಂಗೂಲಿ ಮನಸ್ಸು ಮಾಡಿದಿದ್ದರೆ ಶಾಸ್ತ್ರಿ ಕೋಚ್​​​ ಆಗುತ್ತಲೇ ಇರಲಿಲ್ಲ. ಗಂಗೂಲಿಯ ದೊಡ್ಡ ಮನಸ್ಸು ಮತ್ತು ಟೀಂ ಇಂಡಿಯಾ ಮೇಲಿನ ಕಾಳಜಿ ಇಂದು ಶಾಸ್ತ್ರಿ ಕೋಚ್​​ ಆಗಿದ್ದಾರೆ.

ರವಿಶಾಸ್ತ್ರಿಗೆ ಕೋಚ್​​​ ಭಿಕ್ಷೆ ಕೊಟ್ಟಿದ್ದು ದಾದಾ..!

ಕಳೆದ ಒಂದು ತಿಂಗಳಿನಿಂದ ಟೀಂ ಇಂಡಿಯಾದಲ್ಲಿ ನಡೆದ ಹೈಡ್ರಾಮಗೆ ರವಿಶಾಸ್ತ್ರಿ ಕೋಚ್​​​ ಆಗುತ್ತಿದಂತೆ ತೆರೆಬಿದ್ದಿದೆ. ಕೋಚ್​​​ ಆಗುವವರು ನನ್ನ ಮಾತು ಕೇಳಬೇಕು ಎಂದು ಹಠಹಿಡಿದು ಶಾಸ್ತ್ರಿಯ ಬೆನ್ನಿಗೆ ನಿಂತಿದ್ದ ಕೊಹ್ಲಿಗೆ ತನ್ನ ಇಷ್ಟವಾದ ಕೋಚ್​​​ ಸಿಕ್ಕಿದ್ದಾಗಿದೆ. ಆದ್ರೆ ನಿಮಗೊಂದು ಇಂಟರೆಸ್ಟಿಂಗ್​​​ ವಿಷ್ಯ ಹೇಳಲೇಬೇಕು. ಒಂದು ವೇಳೆ ಶಾಸ್ತ್ರಿಯನ್ನ ಸಂದರ್ಶನ ಮಾಡಿದ ಬಿಸಿಸಿಐ ಸಲಹಾ ಸಮಿತಿ ಸದಸ್ಯ ಸೌರವ್​​​ ಗಂಗೂಲಿ ಏನಾದ್ರೂ ಮನಸ್ಸು ಮಾಡದಿದ್ದರೆ ಶಾಸ್ತ್ರಿ ಕೋಚ್​​​ ಆಗುತ್ತಿರಲಿಲ್ಲ. ಕೊಹ್ಲಿಗೆ ಇಷ್ಟವಾದ ಗುರು ಸಿಗುತ್ತಿರಲಿಲ್ಲ.

ಗಂಗೂಲಿ ಮನಸ್ಸು ಮಾಡದಿದ್ದರೆ ಶಾಸ್ರಿ ಕೋಚ್​​ ಆಗ್ತಾನೇ ಇರಲಿಲ್ಲ..!

ಕೋಲ್ಕತ್ತಾದ ಮಹಾರಾಜ ಕೊಂಚ ಮನಸ್ಸು ಮಾಡಿದ್ದರೆ, ಹಳೆಯದನ್ನ ನೆನಪಿಸಿಕೊಂಡಿದ್ದಿದ್ದರೆ, ಶಾಸ್ತ್ರಿ ತಮ್ಮ ವಿರುದ್ಧ ಮಾಡಿದ್ದ ಕೃತ್ಯವನ್ನ ನೆನಸಿಕೊಂಡಿದ್ದಿದ್ದರೆ ಇಂದು ರವಿಶಾಸ್ತ್ರಿ ಕೋಚ್​​ ಆಗ್ತಾನೇ ಇರಲಿಲ್ಲ. ಆದ್ರೆ ಗಂಗೂಲಿ ಹಳೆಯದನ್ನ ಮರೆತು ತಂಡದ ಬಗ್ಗೆ ಯೋಚನೆ ಮಾಡಿದ್ರು. ಅದೊಂದೇ ಕಾರಣಕ್ಕೆ ಇಂದು ಶಾಸ್ತ್ರಿ ಟೀಂ ಇಂಡಿಯಾ ಡ್ರೆಸ್ಸಿಂಗ್​ ರೂಂಗೆ ಎಂಟ್ರಿ ಸಿಕ್ಕಿರೋದು.

ಇದನೆಲ್ಲಾ ಗಮನಿಸಿದ್ದಾಗ ನೀವು ಸಹಜವಾಗೇ ಕೇಳಬಹುದು. ಗಂಗೂಲಿಗೂ ಶಾಸ್ತ್ರಿಗೂ ಯಾಕೆ ಆಗೋದಿಲ್ಲ. ರವಿಶಾಸ್ತ್ರಿಯನ್ನ ಕಂಡರೆ ದಾದಾ ಆಗದಂತೆ ಮಾಡಿದ ಆ ಸನ್ನಿವೇಶವಾದ್ರೂ ಏನೂ, ಇವರಿಬ್ಬರ ನಡುವೆ ನಡೆದ್ದಾದರು ಏನು ಅಂತ.  ಆದ್ರೆ ಆ ಸನ್ನಿವೇಶವನ್ನ ನಿಮಗೆ ಹೇಳದ್ರೆ ನೀವು ಖಂಡಿತ ದಂಗಾಗ್ತೀರಿ. ಸರಿಯಾಗಿ ಒಂದು ವರ್ಷದ ಹಿಂದೆ ಗಂಗೂಲಿ ಮತ್ತು ಶಾಸ್ತ್ರಿ ನಡುವೆ ಬೆಂಕಿ ಹೊತ್ತಿಕೊಂಡಿದ್ದು ಹೇಗೆ ಅಂತ ಕೇಳಿದ್ರೆ ನೀವು ನಿಜಕ್ಕೂ ಆಶ್ಚರ್ಯ ಪಡ್ತೀರಿ.

ಅಷ್ಟಕ್ಕೂ ಗಂಗೂಲಿ ಮತ್ತು ಶಾಸ್ತ್ರಿ ನಡುವಿನ ಮನಸ್ತಾಪ ಶುರುವಾಗಿದ್ದು ಕಳೆದ ವರ್ಷ ನಡೆದ ಕೋಚ್​​​ ಸಂದರ್ಶನದ ವೇಳೆ. ಕಳೆದ ವರ್ಷ ಕುಂಬ್ಳೆ ಸೇರಿದಂತೆ ಹಲವರು ಕೋಚ್​​ ಹುದ್ದೆಗೆ ಅರ್ಜಿ ಸಲ್ಲಿಸಿದ್ರು. ಅದರಲ್ಲಿ ರವಿಶಾಸ್ತ್ರಿ ಕೂಡ ಒಬ್ಬರು. ಆದ್ರೆ ಅಂದು ಶಾಸ್ತ್ರಿ ನೇರವಾಗಿ ಸಂದರ್ಶನಕ್ಕೆ ಬಾರದೆ ಸ್ಕೈಪ್​​ ಮೂಲಕ ಸಂದರ್ಶನವನ್ನ ಎದುರಿಸಿದ್ರು. ಇದು ಸಂದರ್ಶನ ನಡೆಸಿದ ಸಲಹ ಸಮಿತಿಯಲ್ಲಿದ್ದ ಗಂಗೂಲಿಗೆ ಇಷ್ಟವಾಗಲಿಲ್ಲ. ಹೀಗಾಗಿ ಶಾಸ್ತ್ರಿಯನ್ನ ರಿಜೆಕ್ಟ್​​ ಮಾಡಿದ್ರು.

ಇದಾಗಿ ಸರಿಯಾಗಿ 2 ತಿಂಗಳ ನಂತರ ರವಿಶಾಸ್ತ್ರಿ ತಮ್ಮಗೆ ಇಷ್ಟವಾದ ಟೀಂ ಇಂಡಿಯಾದ ಬೆಸ್ಟ್​​​ ಕ್ಯಾಪ್ಟೇನ್ಸ್​​​​ ಲಿಸ್ಟ್​​​ ಮಾಡಿದ್ರು. ಆದ್ರೆ ಅವರ ಲಿಸ್ಟ್​​ನಲ್ಲಿ ಟೀಂ ಇಂಡಿಯವನ್ನ ಯಶಸ್ವಿಯಾಗಿ ಮುನ್ನಡೆಸಿದ್ದ ಗಂಗೂಲಿಯನ್ನ ಬೇಕೆಂದೇ ಮಿಸ್​​ ಮಾಡಿದ್ರು. ಇದು ದಾದಾರನ್ನ ಕೆರಳಿಸಿತ್ತು. ಈ ಕುರಿತು ಗಂಗೂಲಿಯನ್ನ ಮಾಧ್ಯಮದವರು ಪ್ರಶ್ನಿಸಿದ್ದಾಗ ದಾದಾ ನಾನು ನಾಯಕನ್ನಾಗಿದ್ದಾಗ ಶಾಸ್ತ್ರಿ ಕೋಮದಲ್ಲಿದ್ರು ಎಂದು ಖಾರವಾಗಿ ಉತ್ತರಿಸಿದ್ರು. ಈ ಎರಡು ಘಟನೆ ದಾದಾ ಮತ್ತು ಶಾಸ್ತ್ರಿ ನಡುವಿನ ಸಂಬಂಧ ಎಂತದ್ದು ಎಂದು ತೋರಿಸಿಕೊಟ್ಟಿತ್ತು.

ರವಿಶಾಸ್ತ್ರಿ ಮೇಲೆ ಇಷ್ಟೆಲ್ಲಾ ಕೋಪವಿದ್ದ ಗಂಗೂಲಿ ಅವರನ್ನ ಕೋಚ್​​ ಮಾಡಲು ಸುತಾರಾಂ ಒಪ್ಪಿರಲಿಲ್ಲ. ಯಾವುದೇ ಕಾರಣಕ್ಕೂ ಶಾಸ್ತ್ರಿಯನ್ನ ಕೋಚ್​​​ ಮಾಡೋಕ್ಕೆ ನಾನು ಒಪ್ಪುವುದಿಲ್ಲ ಎಂದು ತಿರ್ಮಾನಿಸಿದ್ರು. ಆದ್ರೆ ಈ ವೇಳೆ ಗಂಗೂಲಿ ಬಳಿ ಬಂದ ಸಚಿನ್​​​ ನಮಗೆ ದೇಶ ಮೊದಲು ನಂತರ ನಮ್ಮ ವೈಯಕ್ತಿಕ ವಿಚಾರಗಳು ಎಂದು ಬುದ್ಧಿಮಾತು ಹೇಳಿದ್ರು. ಸಚಿನ್​ ಅವರ ​ಈ ಮಾತುಗಳು ದಾದರ ಮನಸ್ಸು ಬದಲಿಸಿತ್ತು.

ಕ್ರಿಕೆಟ್​​ ದೇವರ ಆ ಮಾತಿನಿಂದ ದಾದಾ ತಮ್ಮ ನಾಯಕತ್ವದ ಕಾಲಕ್ಕೆ ಹೋಗಿಬಿಟ್ರು. ತಾವು  ಟೀಂ ಇಂಡಿಯಾ ನಾಯಕನ್ನಾಗಿದ್ದಾಗ  ಮೊದಲು ಕೋಚ್​​ ಆಗಿದ್ದ ಜಾನ್​ ರೈಟ್​​​ ಜೊತೆ ಅವರ ಸಂಬಂಧ ಉತ್ತಮವಾಗಿತ್ತು. ಆದರಿಂದ ತನ್ನ ತಂಡ ಯಶಸ್ಸು ಕಾಣ್ತು. ಆದ್ರೆ ನಂತರ ಗ್ರೇಗ್​​ ಚಾಪಲ್​​ ಕೋಚ್​​ ಆದ್ಮೇಲೆ ಅವರ ಮತ್ತು ದಾದ ನಡುವಿನ ಸಂಬಂಧ ಹದಗೆಟ್ಟಿತ್ತು ಆಗ ತಂಡದ ಮೇಲೂ ಪರಿಣಾಮ ಬೀರಿತ್ತು. ಇದನ್ನ ನೆನಪಿಸಿಕೊಂಡ ದಾದ ತಮ್ಮ ವೈಯಕ್ತಿಕ ದ್ವೇಷವನ್ನ ಪಕ್ಕಕ್ಕಿಟ್ಟು ಕೊಹ್ಲಿ ಜೊತೆ ಹೊಂದಿಕೊಳ್ಳೊ ಶಾಸ್ತ್ರಿಗೆ ಓಕೆ ಅಂದ್ರು.

ಒಟ್ಟಿನಲ್ಲಿ ಸೌರವ್​ ಗಂಗೂಲಿಯ ಉದಾರ ಮನಸ್ಸಿನಿಂದ ಇಂದು ರವಿಶಾಸ್ತ್ರಿ ಟೀಂ ಇಂಡಿಯಾವನ್ನ ಸೇರಿಕೊಂಡಿದ್ದಾರೆ. ಗಂಗೂಲಿ ತಮ್ಮ ಕೆಲಸವನ್ನ ಮುಗಿಸಿದ್ದಾರೆ ಈಗೇನಿದ್ರೂ ರವಿಶಾಸ್ತ್ರಿ ಸರದಿ. 2019ರ ವಿಶ್ವಕಪ್ ಜವಬ್ದಾರಿಯನ್ನ ಇವರ ಹೆಗಲ ಮೇಲೆ ಹೊರಿಸಿದ್ದಾಗಿದೆ. ಮತ್ತೆ ಏನಾದ್ರೂ ಕೊಹ್ಲಿ ಮತ್ತು ಶಾಸ್ತ್ರಿ ನಡುವಿನ ಸಂಬಂಧ ಅಳಿಸಿದ್ರೆ, ಅಲ್ಲಿಗೆ 3ನೇ ಬಾರಿ ಚಾಂಪಿಯನ್​​ ಆಗೋ ಕೋಟ್ಯಾಂತರ ಭಾರತೀಯರ ಕನಸು ನುಚ್ಚು ನೂರಾಗಲಿದೆ. ಹಾಗಾಗದಿರಲಿ ಎಂಬುದೇ ನಮ್ಮ ಆಶಯ.

Follow Us:
Download App:
  • android
  • ios