ಕರ್ನಾಟಕ ವಿರುದ್ಧದ ರಣಜಿ ಪಂದ್ಯದಲ್ಲಿ ಚೇತೇಶ್ವರ್ ಪೂಜಾರ ಕ್ರೀಡಾ ಸ್ಪೂರ್ತಿ ಮರೆತು ಆಡಿದ್ದಾರೆ. ಇದು ಅಭಿಮಾನಿಗಳನ್ನಕೆರಳಿಸಿದೆ. ಹೀಗಾಗಿ ಚೇತೇಶ್ವರ್ ಪೂಜಾರ ಬದಲು ಚೀಟರ್ ಪೂಜಾರ ಎಂದು ಅಭಿಮಾನಿಗಳು ಕರೆದಿದ್ದಾರೆ. ಇಲ್ಲಿದೆ ವಿವಾದದ ವಿಡಿಯೋ ಹಾಗೂ ವಿವರ.
ಬೆಂಗಳೂರು(ಜ.28): ರಣಜಿ ಟೂರ್ನಿ ಇದೀಗ ಅಂತಿಮ ಘಟ್ಟ ತಲುಪಿದೆ. ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ನಡೆದ 2ನೇ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡವನ್ನ ಮಣಿಸಿದ ಸೌರಾಷ್ಟ್ರ ಫೈನಲ್‌ಗೆ ಲಗ್ಗೆ ಇಟ್ಟಿದೆ. ಆದರೆ ಈ ಮಹತ್ವದ ಪಂದ್ಯ ಹಲವು ವಿವಾದಕ್ಕೂ ಕಾರಣವಾಗಿದೆ.
ಸೌರಾಷ್ಟ್ರ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ ಕ್ರೀಡಾ ಸ್ಪೂರ್ತಿ ಮರೆತ ಆರೋಪಕ್ಕೆ ಗುರಿಯಾಗಿದ್ದಾರೆ. ಇದು ಒಂದಲ್ಲ , ಎರಡೂ ಇನ್ನಿಂಗ್ಸ್‌ಗಳಲ್ಲಿ ಪೂಜಾರ ನಡೆತೆ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಪೂಜಾರ, ಅಭಿಮನ್ಯು ಮಿಥುನ್ ಎಸೆತದಲ್ಲಿ ಗ್ಲೌಸ್ ಎಡ್ಜ್ ಆಗಿ ಕೀಪರ್‌ಗೆ ಕ್ಯಾಚ್ ನೀಡಿದ್ರು. ಆದರೆ ಅಂಪೈರ್ ನಾಟೌಟ್ ಹೇಳೋ ಮೂಲಕ ಕೆಟ್ಟ ತೀರ್ಪು ನೀಡಿದರು. ಇತ್ತ ಪೂಜಾರ ಕೂಡ ಕ್ರೀಸ್ ಬಿಟ್ಟು ಕದಲಿಲ್ಲ.
ದ್ವಿತೀಯ ಇನ್ನಿಂಗ್ಸ್‌ನಲ್ಲಿ 279 ರನ್ ಟಾರ್ಗೆಟ್ ಪಡೆದ ಸೌರಾಷ್ಟ್ರಕ್ಕೆ ಆಸರೆಯಾದ ಪೂಜಾರ 34 ರನ್ ಸಿಡಿಸಿದಾಗ ವಿನಯ್ ಕುಮಾರ್ ಎಸೆತದಲ್ಲಿ ಔಟ್ ಸೈಡ್ ಎಡ್ಜ್ ಆಗಿ ಕೀಪರ್‌ಗೆ ಕ್ಯಾಚ್ ನೀಡಿದರು. ಎಡ್ಜ್ ಸೌಂಡ್ ಎಲ್ಲರಿಗೂ ಕೇಳಿಸಿತ್ತು. ಆದರೆ ಅಂಪೈರ್ ನಾಟೌಟ್ ಹೇಳಿದರೆ, ಪೂಜಾರ ಕ್ರೀಡಾ ಸ್ಪೂರ್ತಿ ಮರೆತು ಕ್ರೀಸ್‌ನಲ್ಲಿ ಉಳಿದುಕೊಂಡರು.
ಅಂಪೈರ್ ಕೆಟ್ಟ ತೀರ್ಪು ಹಾಗೂ ಕ್ರೀಡಾ ಸ್ಪೂರ್ತಿ ಮರೆತ ಪೂಜಾರ ಅಜೇಯ 131 ರನ್ ಸಿಡಿಸಿ ಸೌರಾಷ್ಟ್ರ ತಂಡಕ್ಕೆ ಗೆಲುವು ತಂದುಕೊಟ್ಟರು. ಪೂಜಾರ ವರ್ತನೆ ನೆರೆದಿದ್ದ ಅಭಿಮಾನಿಗಳನ್ನ ಕೆರಳಿಸಿತ್ತು. ಹೀಗಾಗಿ ಚೇತೇಶ್ವರ್ ಪೂಜಾರ ಬದಲು ಚೀಟರ್ ಪೂಜಾರ ಎಂದು ಅಭಿಮಾನಿಗಳು ಕೂಗಿದರು. ಇದೀಗ ಈ ವಿವಾದ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಬಿಸಿಸಿಐ ಹೆಚ್ಚು ಹೆಚ್ಚು ರಣಜಿ ತಂಡಗಳನ್ನ ಸೇರಿಸಿಕೊಳ್ಳೋ ಬದಲು, ಡಿಆರ್‌ಎಸ್ ಸೇರಿದಂತೆ ಆಧುನಿಕ ತಂತ್ರಜ್ಞಾನ ಅಳವಡಿಸುವುದು ಸೂಕ್ತ. ಜೊತೆಗೆ ವಿಶ್ವದರ್ಜೆಯ ಅಂಪೈರ್‌ಗಳನ್ನ ನೇಮಕ ಮಾಡಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ. ಯಾವತ್ತೂ ದಿಗ್ಗಜ ರಾಹುಲ್ ದ್ರಾವಿಡ್ ಜೊತೆ ಹೋಲಿಕೆ ಮಾಡಬೇಡಿ ಎಂದಿದ್ದಾರೆ.
