ಈ ಪಂದ್ಯವನ್ನು ಸ್ಮರಣೀಯವಾಗಿಸಿಕೊಳ್ಳಲು ನಮ್ಮ ಹುಡುಗರು ಕಾತುರರಾಗಿದ್ದಾರೆ ಎಂದು ಮುಂಬೈ ತಂಡದ ನಾಯಕ ಆಧಿತ್ಯ ತಾರೆ ಹೇಳಿದ್ದಾರೆ.
ಮುಂಬೈ(ನ.09): 41 ಬಾರಿ ರಣಜಿ ಚಾಂಪಿಯನ್ ಮುಂಬೈ ಇಂದು ತನ್ನ 500ನೇ ರಣಜಿ ಪಂದ್ಯವನ್ನು ಆಡಲಿದೆ.
ದಶಕಗಳ ಕಾಲ ಭಾರತೀಯ ದೇಸಿ ಕ್ರಿಕೆಟನ್ನು ಆಳಿ, ಭಾರತ ತಂಡಕ್ಕೆ ಅತಿ ಹೆಚ್ಚು ಆಟಗಾರರನ್ನು ಕೊಡುಗೆ ನೀಡಿರುವ ಮುಂಬೈ, ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಬರೋಡಾ ವಿರುದ್ಧ ಸೆಣಸಾಡಲಿದೆ.
500ನೇ ಪಂದ್ಯವಾಡಲಿರುವ ದೇಶದ ಮೊದಲ ತಂಡ ಎನ್ನುವ ದಾಖಲೆಯನ್ನು ಮುಂಬೈ ಬರೆಯಲಿದೆ. ಮುಂಬೈ ತನ್ನ 100, 200, 300 ಹಾಗೂ 400ನೇ ರಣಜಿ ಪಂದ್ಯಗಳನ್ನು ಗೆದ್ದುಕೊಂಡಿತ್ತು. ಇದೀಗ 500ನೇ ಪಂದ್ಯದಲ್ಲೂ ಗೆಲುವು ಸಾಧಿಸಲು ಪಣ ತೊಟ್ಟಿದೆ.
ಅಜಿಂಕ್ಯ ರಹಾನೆ ಹಾಗೂ ಶ್ರೇಯಸ್ ಅಯ್ಯರ್ ತಂಡ ಆಗಮನ ತಂಡದ ಬಲ ಹೆಚ್ಚಿಸಲಿದೆ. ‘ಮುಂಬೈ ರಣಜಿ ತಂಡ ದೇಶಕ್ಕೆ ಅನೇಕ ದಿಗ್ಗಜ ಕ್ರಿಕೆಟಿಗರನ್ನು ನೀಡಿದೆ. ನನ್ನನ್ನೂ ಸೇರಿ ಅನೇಕರು ರಣಜಿ ಪಂದ್ಯಾವಳಿಯಲ್ಲಿ ಆಡಿದ ಅನುಭವವನ್ನು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬಳಸಿಕೊಂಡಿದ್ದೇವೆ. ಮುಂಬೈ ಜೆರ್ಸಿ ತೊಟ್ಟು ಆಡುವ ಖುಷಿಯೇ ಬೇರೆ’ ಎಂದು ಸಚಿನ್ ತೆಂಡುಲ್ಕರ್ ಹೇಳಿದ್ದಾರೆ.
ಈ ಪಂದ್ಯವನ್ನು ಸ್ಮರಣೀಯವಾಗಿಸಿಕೊಳ್ಳಲು ನಮ್ಮ ಹುಡುಗರು ಕಾತುರರಾಗಿದ್ದಾರೆ ಎಂದು ಮುಂಬೈ ತಂಡದ ನಾಯಕ ಆಧಿತ್ಯ ತಾರೆ ಹೇಳಿದ್ದಾರೆ.
